ಕೊರೋನಾ ವಿರುದ್ಧದ ಹೋರಾಟಕ್ಕೆ ಮತ್ತೆ 100 ಕೋಟಿ ನೀಡಿದ ಇನ್ಫೋಸಿಸ್
1 min readಮೈಸೂರು: ಕೊರೋನಾ ವಿರುದ್ಧದ ಹೋರಾಟಕ್ಕೆ ಇನ್ಫೋಸಿಸ್ ಫೌಂಡೇಶನ್ ಮತ್ತೆ 100 ಕೋಟಿ ರೂ ದೇಣಿಗೆ ನೀಡಿದೆ. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಇಂದು ಘೋಷಣೆ ಮಾಡಿದ್ದಾರೆ.
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಕಳೆದ ವರ್ಷವೂ ಇನ್ಫೋಸಿಸ್ ಫೌಂಡೇಷನ್ 100 ಕೋಟಿ ರೂರು. ದೇಣಿಗೆ ನೀಡಿತ್ತು. ಇದೀಗ ಹೆಚ್ಚುವರಿ 100 ಕೋಟಿ ರೂ. ನೀಡುವ ಮೂಲಕ ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಒಟ್ಟಾರೆ 200 ಕೋಟಿ ದೇಣಿಗೆ ನೀಡಿದಂತಾಗಿದೆ.
ಈ ಬಾರಿಯ ಹಣವನ್ನು ಮೂಲಭೂತ ಸೌಕರ್ಯಗಳ ಪೂರೈಕೆಗಾಗಿ ಬಳಕೆ ಮಾಡಲಾಗುತ್ತದೆ. ವೆಂಟಿಲೇಟರ್, ಆಕ್ಸಿಜನ್ ಯಂತ್ರ ಪೂರೈಕೆಗೆ ಬಳಕೆ, ಮೂಲಸೌಕರ್ಯ ಬಳಕೆಗೆ 100 ಕೋಟಿ ರೂಪಾಯಿ ನೀಡುವುದಾಗಿ ಸುಧಾಮೂರ್ತಿ ಅವರು ಘೋಷಿಸಿದ್ದಾರೆ.