ಜನರಿಗೆ ಮೂಲ ಸೌಕರ‌್ಯ ಒದಗಿಸಿ ಕೊಡಲು ನಿರಂತರ ಶ್ರಮಿಸುವೆ: ಶಾಸಕ ಜಿಡಿ ಹರೀಶ್ ಗೌಡ
1 min readಸಾರ್ವಜನಿಕರಿಗೆ ಉತ್ತಮ ರಸ್ತೆ ವ್ಯವಸ್ಥೆ ಕುಡಿಯುವ ನೀರಿನ ಸಮಸ್ಯೆ ಸಾರಿಗೆ ವಿದ್ಯುತ್ ಶಿಕ್ಷಣ ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಜನರಿಗೆ ಮೂಲ ಸೌಕರ‌್ಯ ಒದಗಿಸಿ ಕೊಡಲು ನಿರಂತರ ಶ್ರಮಿಸುವದಾಗಿ ಶಾಸಕ ಜಿಡಿ ಹರೀಶ್ ಗೌಡ ಹೇಳಿದರು
ಸಮೀಪದ ವೀರನ ಹೊಸಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 30-54 ಯೋಜನೆಯಡಿ 2.5ಕೋಟಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಡಾಂಬರ್ ರಸ್ತೆ ಕಾಮಗಾಗಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಗುಣಮಟ್ಟದ ವಿಚಾರದಲ್ಲಿ ರಾಜಿ ಇಲ್ಲ ಆದ್ದರಿಂದ ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಗುತ್ತಿಗೆದಾರರಿಗೆ ಸೂಚಿಸಿದರು.
ಕಳಪೆಯಾಗದಂತೆ ಗುಣಮಟ್ಟದ ರಸ್ತೆ ನಿರ್ಮಿಸಬೇಕೆಂದು ತಿಳಿಸಿದರು.ಈ ಭಾಗದಲ್ಲಿ ಅತಿ ಹೆಚ್ಚು ಮಳೆ ಬಿಳುವುದರಿಂದ ಇಂಜಿನಿಯರ್ ಗಳು ಕಾಮಗಾರಿ ನಡೆಯುವ ಜಾಗದಲ್ಲಿ ಪ್ರತಿ ದಿನ ಹಾಜರಿದ್ದು ಕಾಮಗಾರಿ ನೋಡಿಕೊಳ್ಳಬೇಕು ಎಂದು ತಾಕಿತು ಮಾಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಉಪಾಧ್ಯಕ್ಷ ಭರತವಾಡಿ ವೆಂಕಟೇಶ್ ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಷ್ ಜಿ ಪಂ ಮಾಜಿ ಸದಸ್ಯ ಸುರೇಂದ್ರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಶಂಕರ್ ಉದ್ಯಮಿ ರವಿಚಂದನ್ ಎಇಇ ಭೋಜರಾಜ್ ಇಂಜಿನಿಯರ್ ಪ್ರಭಕರ್ ಸತೀಶ್ ಪಾಪಣ್ಣ ರಾಜೇಗೌಡ (ಅಜ್ಜ) ಶ್ರಿನಿವಾಸ್ ಕುಮಾರ್ ಗ್ರಾಮದ ಮುಖಂಡರು ಹಾಜರಿದ್ದರು