‘HUMANITY’ ಕಿರು ಚಿತ್ರ ಬಿಡುಗಡೆ
1 min readಮೈಸೂರು: ಮಾಧ್ಯಮ ಮತ್ತು ಮಾನವೀಯತೆ ಹಾಗೂ ಕೊರೊನಾ ಸಂಧರ್ಭದಲ್ಲಿ ಲಾಕ್ ಡೌನ್ ವೇಳೆಯಲ್ಲಿ ಮಾನವೀಯತೆ ಹೇಗೆ ಕೆಲಸಮಾಡುತ್ತಿದೆ, ಏನ್ನುವ ಕಥಾ ಹಂದರ ವಿರುವ HUMANITY ಕಿರು ಚಿತ್ರವನ್ನು ಇಂದು ಬಿಡುಗಡೆ ಗೊಳಿಸಲಾಯಿತು
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಗಳಾದ ಸುಬ್ರಹ್ಮಣ್ಯ ಮಾಜಿ ಅಧ್ಯಕ್ಷರಾದ ಕೆ ದೀಪಕ್, ತಲೆದಂಡ ಚಲನಚಿತ್ರ ನಿರ್ದೇಶಕ ಪ್ರವೀಣ್ ಕೃಪಾಕರ್, ಚಲನಚಿತ್ರ ನಿರ್ಮಾಪಕ ಮತ್ತು ಸಮಾಜಸೇವಕ ಹರ್ಷವರ್ಧನ್ ಗೌಡ ರವರು ಹ್ಯೂಮ್ಯಾನಿಟಿ ಕಿರುಚಿತ್ರದ ಪೊಸ್ಟರ್ ಬಿಡುಗಡೆ ಗೊಳಿಸಿದರು.
ನಂತರ ದಿನನಿತ್ಯ ಮನೆಮನೆಗೆ ಪೇಪರ್ ವಿತರಿಸುವ ವಿತರಕರಿಗೆ ತಂಡದ ವತಿಯಿಂದ ದಿನಸಿಕಿಟ್ ವಿತರಿಸಲಾಯಿತು.
ಮೈಸೂರು ಜಿಲ್ಲಾ ವರದಿಗಾರ ಲೋಹಿತ್ ಹನುಮಂತಪ್ಪ ಅವರ ಕಥೆ- ಚಿತ್ರಕಥೆ- ನಿರ್ದೇಶನದಲ್ಲಿ ಮೂಡಿಬಂದಿರುವ HUMANITY ಕಿರುಚಿತ್ರವನ್ನು ಸಾಹಿತಿ ಗಳಾದ ಬನ್ನೂರು ಕೆ ರಾಜು ಅವರು ಬಿಡುಗಡೆ ಗೊಳಿಸಿದರು,
ಮುಖ್ಯ ಪಾತ್ರದಲ್ಲಿ ಹರೀಶ್ ಶೆಟ್ಟಿ, ಕಿರಣ್ ಬಿ ಗೌಡ , ಮಹದೇವ್ ಲಾಲಿಪಾಳ್ಯ ಅವರು ಅಭಿನಯಿಸಿದ್ದು, ಪೊಷಕ ಪಾತ್ರದಲ್ಲಿ ಮೈಸೂರು ಶಿವು, ದಿವ್ಯೇಶ್ ಗೌಡಗೆರೆ, ರಂಜಿತ್, ವಿನಯ್ ಬಸಪ್ಪ ಅಭಿನಯಿಸಿದ್ದಾರೆ,
ಚಿತ್ರಕ್ಕೆ ರಾಹುಲ್ ರಾಘವ್ ಅವರ ಛಾಯಾಗ್ರಹಣ, ಚಂದನ್ ಬಲರಾಮ್ ಅವರ ಸಹ ಛಾಯಾಗ್ರಹಣ, ಪೃಥ್ವಿ ರಾಜ್ ಅವರ ಸಂಕಲನ, ವಿ ನಿತೀಶ್ ಅವರ ಸಂಗೀತ ಮತ್ತು ಹಿನ್ನೆಲೆ ಧ್ವನಿಯನ್ನು ಬರ್ಟಿ ಒಲಿವೆರಾ ಅವರು ನೀಡಿದ್ದಾರೆ,..