ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು ಮೂವರು ಮಾತ್ರ: ಸಚಿವ ಸುಧಾಕರ್
1 min readಚಾಮರಾಜನಗರ: ಚಾಮರಾಜನಗರದಲ್ಲಿ ಕಳೆದ 24 ಗಂಟೆಯಲ್ಲಿ ಸಂಭವಿಸಿದ ಎಲ್ಲ ಸಾವುಗಳು ಕೂಡ ಆಮ್ಲಜನಕದ ಕೊರತೆಯಿಂದ ಸಂಭವಿಸಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಸುರೇಶ್ ಕುಮಾರ್ ಹಾಗೂ ಆರೋಗ್ಯ ಸಚಿವ ಸುಧಾಕರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಸಚಿವ ಸುಧಾಕರ್ ಇದು ದುಃಖಕರ ಹಾಗೂ ನೋವನ್ನ ತಂದಿರುವ ವಿಚಾರ. ಇದರಲ್ಲಿ ಯಾವುದೇ ತಪ್ಪಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಂದುವರೆದು ಜಿಲ್ಲಾ ಆರೋಗ್ಯಾಧಿಕಾರಿ ಕೊಟ್ಟ ಮಾಹಿತಿ ಪ್ರಕಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 123 ಮಂದಿ ರೋಗಿಗಳು ದಾಖಲಾಗಿದ್ದಾರೆ. ವೆಂಟಿಲೇಟರ್ ನಲ್ಲಿ 14 ಜನ ಇದ್ದಾರೆ. NIV ಮೇಲೆ 20 ಜನ, 29 ಜನ ನಿಮಿಷಕ್ಕೆ ಬೇಕಾದ ಆಕ್ಸಿಜನ್ ತೆಗೆದುಕೊಳ್ಳುವವರು ಇದ್ದಾರೆ. 14 ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. 12 ಗಂಟೆಯಿಂದ 3 ಗಂಟೆಯವರೆಗು ಮೂವರು ಹಸುನೀಗಿದ್ದಾರೆ. 24 ಗಂಟೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ. ಆದರೆ ಇದರಲ್ಲಿ ಆಕ್ಸಿಜನ್‌ನಿಂದ ಮೃತಪಟ್ಟವರು ಕೇವಲ ಮೂರು ಮಂದಿ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಇನ್ನು ಸಚಿವ ಸುರೇಶ್ ಕುಮಾರ್ ಮಾತನಾಡಿ ಎಲ್ಲ ಸಾವುಗಳು ಕೂಡ ಆಮ್ಲಜನಕದ ಕೊರತೆಯಿಂದ ಸಂಭವಿಸಿಲ್ಲ. ಕೊನೆ ಹಂತದಲ್ಲಿ ಮೃತಪಟ್ಟವರದ್ದು ಇದು, ಬಿಪಿಯಿಂದಲು ಇದೆ. ಈ ಬಗ್ಗೆ ಸಮಗ್ರವಾದ ತನಿಖೆ ಆಗಬೇಕಿದೆ. ಮೂರು ದಿನದೊಳಗೆ ಸರ್ಕಾರಕ್ಕೆ ವರದಿ ನೀಡಬೇಕೆಂದು ಆದೇಶ ನೀಡಿದೆ. KSRTC ನಿರ್ದೇಶಕ ಶಿವಯೋಗಿ ಕಳಸದ್ ಅವ್ರಿಗೆ ವಹಿಸಲಾಗಿದೆ. ಈ ಕುರಿತು ಹೊರಗೆ ಬಂದಿರೋ ಭಾವನೆ ಇದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಉತ್ತಮವಾಗಿ ನೀಡಲಾಗಿದೆ. ಈ ದುರಂತಕ್ಕೆ ನಾವು ವಿಷಾಧವನ್ನ ವ್ಯಕ್ತಪಡಿಸುತ್ತೇವೆ ಎಂದರು.