ಮೈಸೂರಲ್ಲಿ ಕೊರೊನಾ ಗೆದ್ದ 98 ವರ್ಷದ ವೃದ್ದನಿಗೆ ಅದ್ದೂರಿ ಸ್ವಾಗತ
1 min readಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಕೊರೊನಾ ಗೆದ್ದ ವೃದ್ದನಿಗೆ ಪುಷ್ಪಾರ್ಚನೆ ಮೂಲಕ ಕುಟುಂಬಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ.
ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ 98 ವರ್ಷದ ಸೂರ್ಯನಾರಾಯಣ್ ಕೊರೊನಾ ಗೆದ್ದ ವೃದ್ದ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಇಂದು ಮನೆಗೆ ಬಂದ 98 ವರ್ಷದ ಹಿರಿಯರಿಗೆ ಕುಟುಂಬಸ್ಥರು ಪುಷ್ಪಾರ್ಚನೆ ಮೂಲಕ ಸ್ವಾಗತ ಕೋರಿದ್ದಾರೆ.
ಕುಟುಂಬಸ್ಥರ ಜೊತೆ ನಗರ ಪಾಲಿಕೆ ಸದಸ್ಯೆ ಶೋಭಾಸುನೀಲ್ ಸಹ ಸ್ವಾಗತ ಕೋರಿದ್ದಾರೆ. ಕೊರೊನಾ ಬಂದವರನ್ನ ಮಾನವೀಯತೆ ದೃಷ್ಠಿಯಿಂದ ನೋಡಲಿ. ಅವರನ್ನ ದೂರ ಮಾಡುವುದು ಬೇಡ. ಈ ಹಿನ್ನಲೆಯಲ್ಲಿ ಅವರಿಗೆ ಈ ರೀತಿಯ ಸ್ವಾಗತ ಕೋರಿದ್ದೇವೆಂದ ಪಾಲಿಕೆ ಸದಸ್ಯೆ ಶೋಭಾಸುನೀಲ್ ತಿಳಿಸಿದ್ದಾರೆ.