ಕೊರೋನ ಸೊಂಕಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಬಲಿ
1 min readಮೈಸೂರು: ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮಾಯಿಗೌಡನಹಳ್ಳಿ ಗ್ರಾ.ಪಂ.ನ ಕರ್ಕ್ ಕೊರೋನ ಸೊಂಕಿಗೆ ಬಲಿಯಾಗಿದ್ದಾರೆ. ಸುನಂದಾ (26) ಎಂಬುವರೇ ಬಲಿಯಾದವರು.
ಕಳೆದ ಭಾನುವಾರ ಮೈಸೂರಿನ ಕೋವಿಡ್ ಆಸ್ವತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
ತಾಲೂಕಿನ ಹಾಡ್ಯ ಗ್ರಾಮದವರಾದ ಸುನಂದ ಅವರನ್ನು ಹುಣಸೂರು ತಾಲೂಕಿನ ರಾಮೇನಹಳ್ಳಿಗೆ ವಿವಾಹ ವಾಗಿದ್ದರು. ಅಲ್ಲಿಂದ ಇಲ್ಲಿಗೆ ಓಡಾಡಿ ಕೊಂಡು ಈ ಗ್ರಾ.ಪಂ.ಗೆ ಕರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಹೆಚ್ಚಿದ ಆತಂಕ: ಇವರ ಸಾವಿನಿಂದ ಗ್ರಾ.ಪಂ.ಅಧಿಕಾರಿಗಳು. ಸಿಬ್ಬಂದಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಆತಂಕ ಹೆಚ್ಚಿಸಿದೆ.