ಉಚಿತ ಮೆಡಿಕಲ್ ಕಿಟ್ ವಿತರಣೆ!
1 min readಮೈಸೂರು: ನರಸಿಂಹ ರಾಜ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಉಚಿತವಾಗಿ ವಾರ್ಡ್ ನಂಬರ್ 35ರ ವ್ಯಾಪ್ತಿಯ ರಾಘವೇಂದ್ರ ನಗರ ಕಾಲೋನಿಯಲ್ಲಿ ಪ್ರತಿ ಮನೆಗೂ ಮೆಡಿಕಲ್ ಕಿಟ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಗಿರಿಧರ್- ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಕರೋನಾ ಸೋಂಕಿತರು ಇದ್ದು ಕರೋನಾ ನಿರ್ಮೂಲನೆ ಮಾಡಲು ಈ ಕ್ಷೇತ್ರದ ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಈ ದೃಷ್ಟಿಯಿಂದ ಕ್ಷೇತ್ರದ ಯಾವೊಬ್ಬ ಮನುಷ್ಯನು ಉಪವಾಸದಿಂದ ಇರಬಾರದು ಎಂಬ ನಿಟ್ಟಿನಿಂದ ಎಲ್ಲಾ ನಾಗರೀಕರಿಗೆ ಅಹಾರ ಪಡಿತರ ವಿತರಣೆ ಜೊತೆ ಪ್ರತಿ ಮನೆಗೆ ಔಷಧೀಯ ಕಿಟ್ ಕೊಟ್ಟು ನಿಮ್ಮ ಆರೋಗ್ಯ, ನಿಮ್ಮ ಕೈಯಲ್ಲಿ ಎಂದು ಮನವಿ ಮಾಡಲಾಯಿತು.
ಇನ್ನು ನಗರ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜೋಗಿಮಂಜು ಮಾತನಾಡಿ ಈ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ವಾಸಿಸುವ ಸ್ಥಳವಾಗಿದ್ದು ಮೈಸೂರು ನಗರ ಕರೋನಾ ಮುಕ್ತ ಮಾಡಲು ಇಂತಹ ಜಾಗಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಕಾರ್ಯಕ್ರಮಗಳನ್ನು ಅತಿ ಹೆಚ್ಚು ಮಾಡಿ ಮೈಸೂರು ನಗರವನ್ನು ಕರೋನಾ ಮುಕ್ತ ಪ್ರದೇಶ ಮಾಡಲು ಎಲ್ಲ ಯುವಕರು ಪಣ ತೋಡಬೇಕು ಎಂದರು.
ಈ ಸಂದರ್ಭದಲ್ಲಿ ಗಿರಿಧರ್, ಜೋಗಿಮಂಜು, ಆನಂದ್, ಗೋಪಾಲ್, ಮಣಿರತ್ನಂ, ಪ್ರಸಾದ್, ವಿಜಯಕುಮಾರ್ ಸೇರಿ ಹಲವರು ಉಪಸ್ಥಿತರಿದ್ದರು.