ರೈತರ ಆತ್ಮಹತ್ಯೆ ತಗ್ಗಿಸಿದ ಮಹಾಮಾರಿ ಕೊರೊನ !
1 min readಮೈಸೂರು: ಮಹಾಮಾರಿ ಕೊರೊನ ರೈತರ ಆತ್ಮಹತ್ಯೆ ತಗ್ಗಿಸಿದೆ. ಕಳೆದ ಒಂದು ವರ್ಷದಿಂದ ರೈತರ ಸಾವಿನ ಪ್ರಮಾಣ ಕಡಿಮೆಯಾಗಿದೆ.
2018-19ರ ಸಾಲಿನಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು. ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿತ್ತು. ಈಗ ಶೇ.70% ಇಳಿಕೆಯಾಗಿದೆ. ಪಟ್ಟಣದಲ್ಲಿರುವ ರೈತ ಕುಟುಂಬಸ್ಥರು ಸಹ ಕೃಷಿ ಮಾಡುತ್ತಿದ್ದಾರೆ.
ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿವುದರಿಂದ ರೈತರಿಗೆ ಸಂಕಷ್ಟ ಕಡಿಮೆಯಾಗಿದೆ. ಇದು ಕೃಷಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಆಗಿದೆ ಎಂದು ಮೈಸೂರಿನಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ಹೇಳಿಕೆ ನೀಡಿದ್ದಾರೆ.