ಮೈಸೂರಿಗರನ್ನ ರೆವಿನ್ಯೂ ಅಧಿಕಾರಿ ಎಂದು ವಂಚಿಸುತ್ತಿದ್ದವ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ!
1 min readಮೈಸೂರು : ನಾನು ರೆವೆನ್ಯೂ ಅಧಿಕಾರಿ ಎಂದು ಎಲ್ಲರನ್ನು ವಂಚಿಸುತ್ತಿದ್ದ ನಕಲಿ ಅಧಿಕಾರಿಯನ್ನ ರಿಯಲ್ ಅಧಿಕಾರಿಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿಬ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರೆವಿನ್ಯೂ ಇನ್ಸ್ ಪೆಕ್ಟರ್ ಎಂದು ಸಾರ್ವಜನಿಕರನ್ನು ಯಾಮಾರಿಸುತ್ತಿದ್ದ ಮೈಸೂರಿನ ವಿದ್ಯಾರಣ್ಯಪುರಂನ ನಿವಾಸಿ ಕಾರ್ತಿಕ್‌ನನ್ನ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಈತ ಕಳೆದ 2 ತಿಂಗಳಿಂದ ಸಾರ್ವಜನಿಕರನ್ನು ವಂಚಿಸುತ್ತಿದ್ದು, ಇಂದು ಹೆಬ್ಬಾಳದ ಸೂರ್ಯ ಬೇಕರಿಯ ಬಳಿ ಕಾರ್ತಿಕ್ ಸೆರೆಯಾಗಿದ್ದಾನೆ.
-ಆರ್ ಕೆ ಗಿಫ್ಟ್ ಸೆಂಟರ್ ನಲ್ಲಿ ವಂಚನೆ ಮಾಡುವಾಗ ವಲಯ ಕಚೇರಿ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಮೈಸೂರಿನ ವಲಯ ಕಚೇರಿ 5ರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಾಕಷ್ಟು ಭಾರೀ ಸಾರ್ವಜನಿಕರು ಮೌಖಿಕವಾಗಿ ಈ ಬಗ್ಗೆ ದೂರು ನೀಡಿದ್ದ ಕಾರಣ ಖುದ್ದು ಆರೋಗ್ಯಾಧಿಕಾರಿ TM ಧನಂಜಯ್ ಗೌಡ ಶೈಲೇಂದ್ರ ನಮ್ರತಾ ಶೃತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಕಾರ್ತಿಕ್ ನಕಲಿ ಅಧಿಕಾರಿ ಎಂದು ಗೊತ್ತಾಗಿದ್ದು ಆತನನ್ನ ಪೊಲೀಸರಿಗೆ ಒಪ್ಪಿಸಲಾಗಿದೆ. ಸದ್ಯ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.