ಕೋವಿಡ್ ವೇಳೆಯಲ್ಲಿ ದಂಧೆಗೆ ಇಳಿದ ನಕಲಿ ಪತ್ರಕರ್ತರು
1 min readಮೈಸೂರು: ಮೈಸೂರಿನಲ್ಲಿ ಪ್ರತಿಷ್ಠಿತ ಟಿವಿ ಚಾನಲ್ ಗಳ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ. ಹಣ ನೀಡದೇ ಇದ್ದರೆ ಪ್ರತಿಷ್ಠಿತ ಟಿವಿ ಚಾನಲ್ ಗಳಲ್ಲಿ ಸುದ್ದಿ ಪ್ರಚಾರ ಮಾಡುವ ಬೆದರಿಕೆ ಹೊಡ್ಡಿದ್ದಾರೆ.
ವೆಬ್ ಚಾನಲ್ ವರದಿಗಾರ ಪ್ರಶಾಂತ ಸೇರಿ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ. ಮೀಡಿಯಾ ಟಿವಿ ಚಾನಲ್ ವರದಿಗಾರ ಪ್ರಶಾಂತ. ಈತ ಎಚ್.ಡಿ.ಕೋಟೆ ಪಟ್ಟಣದ ಆಸ್ಪತ್ರೆ ಬಡಾವಣೆಯ ನಿವಾಸಿ. ಟಿವಿ ಚಾನಲ್ ಹೆಸರಿನಲ್ಲಿ ಬ್ಲಾಕ್ ಮೇಲ್ ಗೆ ಮುಂದಾಗಿದ್ದಾನೆ.
ಈ ಪ್ರಶಾಂತ ಪಟ್ಟಣದ ಪಾರ್ವತಿ ಹೆಲ್ತ್ ಕೇರ್ ಕ್ಲಿನಿಕ್ ಮಾಲೀಕರ ಪತಿಯಿಂದ 40 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದೇ ಇದ್ದರೆ ಪ್ರತಿಷ್ಠಿತ ಟಿವಿ ಚಾನಲ್ ಗಳಲ್ಲಿ ಸುದ್ದಿ ಪ್ರಚಾರ ಮಾಡುವ ಬೆದರಿಕೆ ಒಡ್ಡಿದ್ದಾನೆ.
ಹಣ ನೀಡಿದರೆ ಸುದ್ದಿ ಬಿತ್ತರಿಸದೇ ತಡೆ ಹಿಡಿಯಲು ಚಾನಲ್ ಅವರೊಂದಿಗೆ ಮಾತುಕತೆ ಮಾಡುವುದಾಗಿ ನಂಬಿಸಿದ್ದ ಪ್ರಶಾಂತ್’ನ ಮಾತುಕತೆ ಆಡಿಯೋ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.
ಸರಗೂರು ಸರ್ಕಾರಿ ಆಸ್ಪತ್ರೆ ಶುಶ್ರೂಷಕನಾಗಿ ಸೇವೆ ಸಲ್ಲಿಸುತ್ತಿರುವ ಪುಟ್ಟರಾಜು ಅವರ ಪತ್ನಿ ಪಾರ್ವತಿ ಎಚ್.ಡಿ.ಕೋಟೆ ಪಟ್ಟಣದಲ್ಲಿ ಪಾರ್ವತಿ ಹೆಲ್ತ್ ಕೇರ್ ಕ್ಲಿನಿಕ್ ನಡೆಸುತ್ತಿದ್ದು ಸರ್ಕಾರಿ ನೌಕರಿಯಲ್ಲಿದ್ದು ಕ್ಲಿನಿಕ್ ನಡೆಸುವ ಸುದ್ದಿ ಬಿತ್ತರಿಸುವ ಬೆದರಿಕೆ ಹಾಕಿ ಹಣಕ್ಕೆ ಒತ್ತಾಯ ಮಾಡಿದ್ದಾರೆ.
ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.