ಮೈಸೂರಿನ ಪ್ರವಾಸೋದ್ಯಮದ ಅಂಬಾರಿ ಮತ್ತೇ ತಾತ್ಕಾಲಿಕ ಸ್ಥಗಿತ!
1 min readಪ್ರವಾಸೋದ್ಯಮದ ತವರೂರು ಎಂದೇ ಖ್ಯಾತಿ ಪಡೆದ ನಮ್ಮ ಮೈಸೂರಲ್ಲಿಗಾ ಮತ್ತೇ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಇಂದಿನಿಂದ ಆತಂಭವಾಗಬೇಕಿದ್ದ ಡಬಲ್ ಡೆಕ್ಕರ್ ಬಸ್ ಇದೀಗಾ ತಾತ್ಕಾಲಿಕವಾಗಿ ಮತ್ತೇ ಮುಂದೂಡಲಾಗಿದೆ. ಹೌದು, ಮೈಸೂರಿನಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ಮಾಡಲಾಗಿದ್ದ ಡಬಲ್ ಡೆಕ್ಕರ್ ಬಸ್ ಇದೀಗಾ ಮತ್ತೇ ರಸ್ತೆಗಿಳಿಯದೆ ಬೆಚ್ಚನೆ ನಿಂತಿದೆ. ಇದಕ್ಕೆ ಕಾರಣ ಪ್ರವಾಸಿಗರ ಕೊರತೆ.
ಪ್ರವಾಸಿಗರ ಕೊರತೆಯಿಂದ ತಾತ್ಕಾಲಿಕವಾಗಿ ನಿಂತಿದ್ದ ಡಬಲ್ ಡೆಕ್ಕರ್ ಬಸ್, ಇದೀಗಾ ಪ್ರವಾಸಿಗರಿಲ್ಲದೆ ಮತ್ತೇ ತಾತ್ಕಾಲಿಕ ಸ್ಥಗಿತ ಕಂಡಿದೆ. ಈ ಮೂಲಕ ಇಂದಿನಿಂದ ಆರಂಭವಾಗಬೇಕಿದ್ದ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಇಂದು ಬೆಳಗ್ಗೆ 8ಕ್ಕೆ ಡಬಲ್ ಡೆಕ್ಕರ್ ಬಸ್ ಪ್ರಯಾಣ ಮಾಡಬೇಕಿತ್ತು. ಇದಕ್ಕಾಗಿ ಆನ್‌ಲೈನ್ ಟಿಕೆಟ್ ಕೂಡ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪ್ರವಾಸಿಗರು ಈ ಬಗ್ಗೆ ಆಸಕ್ತಿ ತೋರದೆ ಇರುವ ಕಾರಣ ಇವತ್ತು ಮತ್ತೇ ಡಬಲ್ ಡೆಕ್ಕರ್ ಬಸ್ ತಾತ್ಕಾಲಿಕ ಸ್ಥಗಿತಗೊಂಡಿದೆ.
250ರೂ ಮೈಸೂರು ದರ್ಶನ
250 ರೂಗೆ ಎರಡು ಗಂಟೆಗಳ ಕಾಲ ಮೈಸೂರಿನ ಪ್ರಮುಖ ಸ್ಥಳಗಳು, ಪುರಾತನ ಕಟ್ಟಡ ಅರಮನೆ ಸೇರಿ ಪ್ರಮುಖ ರಸ್ತೆಗಳಲ್ಲಿ ಅದರ ಮಹತ್ವ ತಿಳಿಸುವ ಈ ಅಂಬಾರಿ ಬಸ್ ಲಾಕ್‌ಡೌನ್ ಕಾರಣ ಸ್ಥಗಿತಗೊಂಡಿತು. ಆದರೆ ಇಂದಿನಿಂದ ಆರಂಭ ಮಾಡಬೇಕೆಂದು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸಿದ್ದತೆ ಮಾಡಿಕೊಂಡಿರುವಾಗಲೇ ಪ್ರವಾಸೋದ್ಯಮಕ್ಕೆ ಒಡೆತ ಬಿದ್ದಿದೆ. ಇದ್ರಿಂದ ಮತ್ತೇ ಡಬಲ್ ಡೆಕ್ಕರ್ ಬಸ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಕೇರಳದಲ್ಲಿ ಕೊರೋನಾ- ಪ್ರವಾಸಿಗರೇ ಇಲ್ಲ
ಇನ್ನು ಕೇರಳದಲ್ಲಿ ಕರೋನಾ ಸ್ಪೋಟವಾಗುತ್ತಿದೆ. ಇದರ ಬೆನ್ನಲೇ ಪ್ರವಾಸಿಗರು ಕೂಡ ಕಡಿಮೆ ಆಗಿದ್ದಾರೆ. ಕೇರಳದಿಂದ ಬರುವ ಪ್ರವಾಸಿಗರಿಗೆ ಆರ್‌ಟಿಪಿಸಿಆರ್ ವರದಿ ನೆಗಿಟಿವ್ ಇರಬೇಕಾಗಿದೆ. ಆದ ಕಾರಣ ಅಲ್ಲಿಂದ ಪ್ರವಾಸಿಗರು ಕೂಡ ಮೈಸೂರಿಗೆ ಬರಲು ಹಿಂದೇಟು ಹಾಕಿದ್ದಾರೆ. ಇದ್ರಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದರು ಕರೋನಾ ಕಂಟ್ರೋಲ್‌ಗೆ ಜಿಲ್ಲಾಢಳಿತ ಕ್ರಮ ಕೈಗೊಂಡಿದೆ.
ಸದ್ಯಕ್ಕೆ ಡಬಲ್ ಡೆಕ್ಕರ್ ಬಸ್ ಸಂಚಾರ ಕಷ್ಟ
ಇನ್ನು ಇನ್ನೆರಡು ತಿಂಗಳಲ್ಲಿ ದಸರಾ ಸಂಭ್ರಮ ಶುರುವಾಗಲಿದೆ. ಈ ನಡುವೆಯೇ ಮತ್ತೇ ಲಾಕ್‌ಡೌನ್ ಆಗುವ ಸಾಧ್ಯತೆಗಳು ಸಹ ಗೋಚತವಾಗುತ್ತಿದೆ. ಇದ್ರಿಂದ ಮತ್ತೇ ಲಾಕ್‌ಡೌನ್ ನಂತಹ ಪರಿಸ್ಥಿತಿ ಬಂದರೇ ಮತ್ತೇ ಡಬಲ್ ಡೆಕ್ಕರ್ ಬಸ್ ಸಂಚಾರ ಆಗೋದು ಡೌಟೆ. ಆದರಿಂದ ದಸರಾ ವೇಳೆಗೆ ಪ್ರವಾಸಿಗರು ಬರಬೇಕು ಅಚ್ಚುಕಟ್ಟಾಗಿ ನಡೆಯಬೇಕು ಅಂದರೆ ಸರಿಯಾದ ಕ್ರಮ ಅಗತ್ಯ