ನಾವೆಲ್ಲ ಒಗ್ಗಟಾಗಿ ರಾಷ್ತ್ರ ಧ್ವಜ ಎತ್ತಿ ಹಿಡಿಯಬೇಕು? ರಾಜಕಾರಣ ಮಾಡಬಾರದು- ಬಿಜೆಪಿಗೆ ಕಿವಿ ಮಾತು ಹೇಳಿದ ಡಿಕೆಶಿ.
1 min readಬೆಂಗಳೂರು : ದೇಶದ 75 ನೇ ವರ್ಷದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಈ ದೇಶದ ದೊಡ್ಡ ಇತಿಹಾಸ ಹಾಗೂ ಚರಿತ್ರೆ. ನಮ್ಮ ಮುಂದಿನ ಪೀಳಿಗೆ, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನ ಈ ದೇಶದ ಚರಿತ್ರೆ ಹಾಗೂ ಅದರ ಹಿಂದಿರುವ ನೋವು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್ ಒಂದು ವೇದಿಕೆಯಾಗಿದೆ.
ಇತಿಹಾಸ ತಿರುಚಲು ಬಿಜೆಪಿ ಪ್ರಯತ್ನಿಸುತ್ತಿದೆ. ನಿನ್ನೆಯನ್ನು ದೇಶ ವಿಭಜನೆ ದಿನ ಎಂದು ಹೇಳಿದ್ದಾರೆ. ಆದರೆ ಈ ವರ್ಷ ನಾವೆಲ್ಲರೂ ಯಾವ ನೋವು, ಯಾರಿಂದ ಈ ನೋವು ಅನುಭವಿಸುತ್ತಿದ್ದೇವೆ ಎಂಬುದು ಮುಖ್ಯ. ಆದರೆ ನಮಗೆ ರಾಜಕಾರಣ ಮುಖ್ಯ ಅಲ್ಲ. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಮುಖ್ಯ. ನಾವು ಇಂದು 20 ವರ್ಷಗಳಷ್ಟು ಹಿಂದಕ್ಕೆ ಹೋಗಿದ್ದೇವೆ.
ಈ ಸಮಯದಲ್ಲಿ ನಾವು ರಾಷ್ಟ್ರಧ್ವಜವನ್ನು ಒಗ್ಗಟ್ಟಾಗಿ ಎತ್ತಿ ಹಿಡಿಯಬೇಕು. ಉದ್ಯೋಗ ಸೃಷ್ಟಿ ಆಗಬೇಕು. ನೆಮ್ಮದಿ ಸಹಬಾಳ್ವೆ ನೆಲೆಸಬೇಕು. ಜಾತ್ಯಾತೀತ ತತ್ವ ಉಳಿಸಿಕೊಂಡು, ಬುದ್ಧ, ಬಸವ, ಅಂಬೇಡ್ಕರ್ ಬೋಧನೆಯಂತೆ, ಗಾಂಧೀಜಿ ಅವರ ಮಾರ್ಗದರ್ಶನ ಗಮನದಲ್ಲಿಟ್ಟುಕೊಂಡು ಈ ದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು.
ನಾವು ರಾಜಕೀಯ ಮಾತನಾಡುವುದಿಲ್ಲ. ನಮ್ಮ ಸಾಧನೆ ಬಗ್ಗೆ ಹೇಳುತ್ತಿಲ್ಲ. ಸದ್ಯದ ಸಂಕಟ ಸ್ಥಿತಿಯನ್ನು ಯಾವ ರೀತಿ ನಿರ್ವಹಣೆ ಮಾಡಿದ್ದೇವೆ, ಮುಂದೆ ಯಾವ ರೀತಿ ಹೋಗಬೇಕು ಎಂದು ತಿಳಿಸಿದ್ದೇನೆ. ಆಕ್ಟೋಬರ್ ತಿಂಗಳಿಂದ ನಮ್ಮ ಕಾರ್ಯಕ್ರಮ ಆರಂಭಿಸವಾಗುತ್ತದೆ. ನಮ್ಮ ನಾಯಕರು ಪ್ರತಿ ಗ್ರಾಮ ಪಂಚಾಯ್ತಿಗೂ ಭೇಟಿ ನೀಡಲಿದ್ದಾರೆ.
ನಾನು ಮುಖ್ಯಮಂತ್ರಿ ಭಾಷಣ ಮಾಡಲಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಯಾವ ರೀತಿ ಮುಂದಕ್ಕೆ ಹೋಗಬೇಕು ಎಂಬ ಬಗ್ಗೆ ಸಂದೇಶ ಕೊಟ್ಟಿದ್ದೇನೆ.
ಇಂತಹ ಪವಿತ್ರವಾದ ದಿನದ ಇತಿಹಾಸ ಗೊತ್ತಿಲ್ಲದವರ ಬಗ್ಗೆ ಮಾತನಾಡುವುದಿಲ್ಲ.