ಮೈಸೂರಿನಲ್ಲಿ ಸಿನಿಮಾ ಜೂನಿಯರ್ ಕಲಾವಿದರಿಗೆ ಆಹಾರ ಕಿಟ್ ವಿತರಣೆ
1 min readಮೈಸೂರು: ಕೊರೊನಾ ಮಹಾಮಾರಿ ಇಂದ ನಿಜಕ್ಕೂ ಸಮಸ್ಯೆ ಎದುರಿಸುತ್ತಿರುವುದು ದಿನಗೂಲಿ ನೌಕರರು, ಹಾಗೇಯೇ ಸಿನಿ ಕಾರ್ಮಿಕರು, ಸಿನಿಮಾ ವನ್ನೇ ನಂಬಿ ಬದುಕುತ್ತಿರುವ ಅದೆಷ್ಟೋ ಕಾರ್ಮಿಕರು ಇಂದು ಅಕ್ಷರಶಃ ಪರದಾಡುತ್ತಿದ್ದಾರೆ..
ಲಾಕ್ ಡೌನ್ ಮುಗಿಯುವವರೆಗೂ ಅವರಿಗೆ ಈ ತೊಂದರೆ ತಪ್ಪಿದ್ದಲ್ಲ. ಇಂದು ಮೈಸೂರಿನ ಸಿನಿಮಾ ಜೂನಿಯರ್ ಕಲಾವಿದರಿಗೆ ಉಪೇಂದ್ರ ಮತ್ತು ದಾನಿಗಳು ಆಹಾರ ಕಿಟ್ ಜೊತೆಗೆ ತರಕಾರಿಗಳನ್ನು ವಿತರಿಸಲಾಯಿತು.
ನಗರದ ಗನ್ ಹೌಸ್ ಶಂಕರ ಮಠದ ಪಕ್ಕದ ಕಲ್ಯಾಣ ಮಂಟಪದಲ್ಲಿ ಜೂನಿಯರ್ ಕಲಾವಿದರ ಸಂಘದ ಮೈಸೂರು ಶಿವು ಅವರ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸಲಾಯಿತು.
ಇದೆ ಸಂಧರ್ಭದಲ್ಲಿ ಮಾತಾನಾಡಿದ ಎಲ್ಲಾ ಕಲಾವಿದರು ಉಪೇಂದ್ರ ಅವರ ಕಾರ್ಯವನ್ನು ಶ್ಲಾಘಿಸಿದರು.