ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ಕಾರಣವೇ ಬೇರೆ- ಸಂಸದ ಪ್ರತಾಪ್ ಸಿಂಹ.!

1 min read

ಮೈಸೂರು: ಇದು ಮೇಲ್ನೋಟಕ್ಕೆ ಇಬ್ಬರು ಐಎಎಸ್ ಅಧಿಕಾರಿಗಳ ಬೀದಿ ಜಗಳ, ಅದರ ಬೆನ್ನಲ್ಲೇ ಇಬ್ಬರ ಎತ್ತಂಗಡಿ ಹಾಗೂ ಇದರ ಹಿಂದೆ ರಾಜಕಾರಣಿಗಳ ಕೈವಾಡವೂ ಇದೆ ಎಂಬ ಭಾವನೆ ಮೂಡುವುದು ಸಹಜ. ಆದರೆ, ವಾಸ್ತವದಲ್ಲಿ 28 ದಿನಗಳಿಗೇ ಮೈಸೂರಿನಿಂದ ಎತ್ತಂಗಡಿಯಾಗಿದ್ದ ಶರತ್ ಅವರು ನನಗೆ ಎರಡು ವರ್ಷಗಳ ಸೇವಾವಧಿ ಸಿಗದೆ ಅನ್ಯಾಯವಾಗಿದೆ ಎಂದು ಕೋರ್ಟ್ ಮೊರೆ ಹೋಗಿದ್ದರು.

ಇಷ್ಟಕ್ಕೂ ಶರತ್ ಸ್ಥಾನಕ್ಕೆ ಬಂದಿದ್ದ ಇದೇ ರೋಹಿಣಿ ಸಿಂಧೂರಿ ಅವರು ಹಾಸನದ ಡಿಸಿ ಆಗಿದ್ದಾಗ ತಮಗೆ ಎರಡು ವರ್ಷಗಳ ಸೇವಾವಧಿಯನ್ನು ನೀಡದೆ ಪದೆ ಪದೇ ವರ್ಗಾವಣೆ ಮಾಡಲಾಗುತ್ತಿದೆ ಎಂದು 3 ಬಾರಿ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಹಾಗಾಗಿ, 28 ದಿನಕ್ಕೇ ನನ್ನನ್ನು ಎತ್ತಂಗಡಿ ಮಾಡುವಾಗ ಹಾಸನದ ಡಿಸಿಯಾಗಿ ತಾನೇ ಪಡೆದುಕೊಂಡಿದ್ದ ನ್ಯಾಯ ರೋಹಿಣಿ ಯವರಿಗೆ ನೆನಪಾಗಲಿಲ್ಲವೇ ಎಂದು ಶರತ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೂ ಪ್ರಕರಣ ಶೀಘ್ರ ಇತ್ಯರ್ಥವಾಗದೆ ಶರತ್‌ಗೆ ನ್ಯಾಯ ಸಿಗುವುದು ಕಾರಣಾಂತರಗಳಿಂದ ವಿಳಂಬವಾಯಿತು.

ಇದರಿಂದ ಬೇಸತ್ತ ಶರತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಜೂ. ನಾಲ್ಕರಂದು ನಡೆದ ವಿಚಾರಣೆ ವೇಳೆ ಇನ್ನು ಮುಂದೆ ಸರ್ಕಾರಕ್ಕೆ ಯಾ ವುದೇ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಜೂ.7ರಂದು ತನ್ನ ಅಂತಿಮ ಅಭಿಪ್ರಾಯ ತಿಳಿಸಬೇಕು ಎಂದು ನ್ಯಾಯಾಧೀಶರು ಖಡಕ್ ಎಚ್ಚರಿಕೆ ನೀಡಿದರು. ಸೋಮವಾರ ನ್ಯಾಯಾಲಯದ ಮುಂದೆ ಅಂತಿಮ ವಾದ-ವಿವಾದ ನಡೆದು ಶೀಘ್ರದಲ್ಲೇ ತೀರ್ಪು ಹೊರ ಬೀಳಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತರಾತುರಿಯಲ್ಲಿ ವರ್ಗಾವಣೆ ಮಾಡಿದೆಯೇ ಹೊರತು ಇದರ ಹಿಂದೆ ಯಾವ ಕೈವಾಡವೂ ಇಲ್ಲ.

ಹಾಸನದ ಡಿಸಿಯಾಗಿದ್ದಾಗ ರೋಹಿಣಿ ಸಿಂಧೂರಿಗೆ ಎರಡು ವರ್ಷಗಳ ಸೇವಾವಧಿ ನೀಡಬೇಕೆಂಬ ಕಾರಣಕ್ಕೆ ಕೋರ್ಟ್ ವರ್ಗಾವಣೆಯನ್ನು ರದ್ದುಮಾಡಿದ ಹಾಗೆಯೇ ಶರತ್ ಗೆ ಅದೇ ನೀತಿ ಅನ್ವಯವಾಗಬೇಕಿದೆ. ಆದ್ದರಿಂದ ಯಾರೂ ವರ್ಗಾವಣೆಯಲ್ಲಿ ರಾಜಕೀಯದ ವಾಸನೆಯನ್ನು ಹುಡುಕಬೇಕಿಲ್ಲ. ಒಂದು ವೇಳೆ ಭೂಮಾಫಿಯಾ ಅವರ ವಿರುದ್ಧ ತಿರುಗಿ ಬಿದ್ದಿತ್ತು ಮತ್ತು ಅದರ ಪ್ರಭಾವದಿಂದ ವರ್ಗಾವಣೆಯಾಗಿದೆ ಎನ್ನುವುದಾದರೆ, 2020 ಸೆಪ್ಟೆಂಬರ್ ನಿಂದ 2021 ಜೂನ್ ವರೆಗೂ ( ಎಂಟು ತಿಂಗಳು) ಆ ಭೂಮಾಫಿಯಾವನ್ನು ಪತ್ತೆಹಚ್ಚಿ ಹಿಡಿದು ಹೆಡೆಮುರಿ ಕಟ್ಟಿ ಬಗ್ಗುಬಡಿಯಲು ಸಿಂಧೂರಿಯವರೇಕೆ ಪ್ರಯತ್ನಿಸಲಿಲ್ಲ? ಕನಿಷ್ಠಪಕ್ಷ, ಅವರು ಪತ್ತೆ ಮಾಡಿರುವ ಕಡತಗಳನ್ನು ಬಹಿರಂಗ ಮಾಡಿಯಾದರೂ ಹೋಗಲಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ.

About Author

Leave a Reply

Your email address will not be published. Required fields are marked *