ಮಂಚು ಮನೋಜ್ ನಟನೆಯ ‘ಮಿರಾಯ್’ ಫಸ್ಟ್ ಲುಕ್ ರಿಲೀಸ್ ಮಾಡಿದ ಡಿಬಾಸ್-ಕಿಚ್ಚ

1 min read

ಸಿನಿಮಾ: ತೆಲುಗಿನ ರಾಕಿಂಗ್ ಸ್ಟಾರ್ ಅಂತಾ ಕರೆಯಲ್ಪಡುವ ಮಂಚು ಮನೋಜ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿರುವ ಮನೋಜ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 8 ವರ್ಷದ ಬಳಿಕ ಮಂಚು ಮನೋಜ್ ಮತ್ತೆ ಬಣ್ಣ ಹಚ್ಚಿದ್ದಾರೆ. ಹನುಮಾನ್ ಖ್ಯಾತಿಯ ತೇಜ್ ಸಜ್ಜಾ ನಾಯಕನಾಗಿ ನಟಿಸುತ್ತಿರುವ ಮಿರಾಯ್ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಮನೋಜ್ ಬೆಳ್ಳಿತೆರೆಗೆ ಮತ್ತೆ ಕಂಬ್ಯಾಕ್ ಆಗಿದ್ದಾರೆ.

ಮಂಚು ಮನೋಜ್ ಜನ್ಮದಿನದ ವಿಶೇಷವಾಗಿ ಮಿರಾಯ್ ಚಿತ್ರತಂಡ ಸ್ಪೆಷಲ್ ವಿಡಿಯೋ ಬಿಡುಗಡೆ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಮನೋಜ್ ಫಸ್ಟ್ ಲುಕ್ ಬಿಡುಗಡೆ ಮಾಡಿ ಪ್ರೀತಿಯ ಸಹೋದರನಿಗೆ ಶುಭಾಷಯ ಕೋರಿದ್ದಾರೆ. ‘ದಿ ಬ್ಲ್ಯಾಕ್ ಸ್ವೋರ್ಡ್’ ಟೈಟಲ್ ನಡಿ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ಮನೋಜ್ ಉದ್ದ ಕೂದಲು ಬಿಟ್ಟು ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ಆಕ್ಷನ್ಸ್ ಮೂಲಕ ಗಮನಸೆಳೆಯುವ ಮಂಚು ಮನೋಜ್ ಡಬಲ್ ಶೇಡ್ ನಲ್ಲಿ ನಟಿಸಿದ್ದಾರೆ.

‘ಮಿರಾಯ್’ ಸಿನಿಮಾಗೆ ಕಾರ್ತಿಕ್ ಗಟ್ಟಮ್ನೇನಿ ಆಕ್ಷನ್ ಕಟ್ ಹೇಳಿದ್ದಾರೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಬಿಚ್ಚಿಡುವ ಕಥೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿಜಿ ವಿಶ್ವಪ್ರಸಾದ್ ಮಿರಾಯ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಕಾರ್ತಿಕ್ ಗಟ್ಟಮ್ನೇನಿ ಮಿರಾಯ್‌ಗೆ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದು, ಮಣಿಬಾಬು ಕರಣಂ ಅವರು ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶಕನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರಾಗಿದ್ದಾರೆ. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

ಮಿರಾಯ್ ಸಿನಿಮಾವನ್ನು 2 ಡಿ ಹಾಗೂ 3 ಡಿ ವರ್ಷನ್ ನಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮುಂದಿನ ವರ್ಷದ ಏಪ್ರಿಲ್ 18ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.

About Author

Leave a Reply

Your email address will not be published. Required fields are marked *