ಗಣೇಶ ಹಬ್ಬದಂದು ಹೊಸ ‘ಕ್ರಾಂತಿ’‌ಗೆ ಸಜ್ಜಾದ ಡಿ ಬಾಸ್!

1 min read

ಡಿ ಬಾಸ್ ದರ್ಶನ್‌ರ 55ನೇ ಚಿತ್ರ ಯಾವುದು? ಯಾವುದು? ಎಂಬ ಕುತೂಹಲ ಎಲ್ಲರಿಗು ಇತ್ತು. ಅದರಲ್ಲು ರಾಬರ್ಟ್ ಸೂಪರ್ ಹಿಟ್ ಆದ್ಮೇಲಂತು ಡಿ ಬಾಸ್ ಹವಾ’ ಪ್ಯಾನ್ ಇಂಡಿಯಾದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ಆದರೀಗ ಗೌರಿ ಗಣೇಶ ಹಬ್ಬದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55 ನೇ ಚಿತ್ರದ ಟೈಟಲ್ ಯಾವುದು ಅಂತು ರಿವೀಲ್‌ ಆಗಿದ್ದು ಹೊಸ ‘ಕ್ರಾಂತಿ’ ಮಾಡಲು ಡಿ ಬಾಸ್ ಸಜ್ಜಾಗಿದ್ದಾರೆ.

ಡಿ‌ ಬಾಸ್ ದರ್ಶನ್ 55ನೇ ಸಿನಮಾದ ಟೈಟಲ್ ಲಾಂಛ.

ಹೌದು- ಡಿ ಬಾಸ್ ದರ್ಶನ್ ಇದೀಗಾ ಹೊಸ‌ ಕ್ರಾಂತಿ ಆರಂಭಿಸಿದ್ದಾರೆ. ಅರೆ ಟೈಟಲ್ ಹೇಳ್ತಿನಿ ಅಂತ ಕ್ರಾಂತಿ ಕ್ರಾಂತಿ ಅಂತಿದ್ದೀರಲ್ಲ ಅನ್ಕೋಬೇಡಿ. ಡಿ ಬಾಸ್ ದರ್ಶನ್‌ರ ಮುಂದಿನ ಚಿತ್ರದ ಹೆಸರೇ ಕ್ರಾಂತಿ’

ಐದು ಭಾಷೆಗಳಲ್ಲು ಈ ಟೈಟಲ್ ಈಗಾಗಲೇ ರಿಲೀಸ್ ಆಗಿದ್ದು ಗಣೇಶ ಹಬ್ಬದ ಇಂದು ಟೈಟಲ್ ಬೆಳಗ್ಗೆ 9ಗಂಟೆಗೆ ರಿಲೀಸ್ ಆಗಿದೆ. ಡಿ ಬಾಸ್ ತಮ್ಮ ಟ್ವಿಟರ್ ಹಾಗೂ ಫೇಸ್ಬುಕ್‌ನಲ್ಲಿ ಹಾಕಿಕೊಂಡಿದ್ದೆ ತಡ ನೂರಾರು ಸಂಖ್ಯೆ ರೀ ಟ್ವೀಟ್ ಹಾಗೂ ಶೇರ್, ಆಗಿದ್ದು ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್ ಬರುತ್ತಿದೆ.

ಕೆಲವೇ ನಿಮಿಷದಲ್ಲಿ ಸಾವಿರಾರು ರೀ ಟ್ವಿಟ್

ಈಗಾಗಲೇ ಶೈಲಜನಾಗ್ ಹಾಗೂ ಬಿ.ಸುರೇಶ್ ಅವರ ಕಾಂಬಿನೇಷನ್ ಹಾಗೂ ವಿ.ಹರಿಕೃಷ್ಣರ ಮ್ಯೂಸಿಕ್ ನಿಂದ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿತ್ತು ಯಜಮಾನ ಚಿತ್ರ. ದರ್ಶನರ ನಿಜ ಜೀವನದ ಅಂಶ ಹಾಗೂ ಸಮಾಜದಲ್ಲಿ ರೈತರಿಗಾಗುವ ಸಮಸ್ಯೆ ಬಗ್ಗೆ ಹೇಳುವ ಎಳೆಯನ್ನ ಇಟ್ಟುಕೊಂಡು ಯಜಮಾನ ಚಿತ್ರ ಮಾಡಿ ಯಶಸ್ಸು ಕಂಡಿದ್ದರು ಈ ಟೀಂ. ಇದೀಗಾ ಮತ್ತೇ ಕ್ರಾಂತಿ ಮೂಲಕ ಈ ಟೀಂ ಒಂದಾಗಿದ್ದು ಮತ್ತೊಂದು ಹೊಸ ಇತಿಹಾಸ ಸೃಷ್ಟಿಗೆ ವೇದಿಕೆ ಸಜ್ಜಾಗಿದೆ.

ಕನ್ನಡ ಸೇರಿ ಐದು ಭಾಷೆಯಲ್ಲಿ ಹೊಸ ಕ್ರಾಂತಿ

ದರ್ಶನ್ ಮ್ಯಾನರಿಜಮ್‌ಗೆ ಕ್ರಾಂತಿ ಟೈಟಲ್ ಹೇಳಿ‌ ಮಾಡಿಸದಾಗಿದ್ದು, ಟೈಟಲ್ ಲುಕ್‌ನಲ್ಲಿ ದರ್ಶನ್ ಸಖತ್ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ‘ಕ್ರಾಂತಿ’ ಮತ್ತೊಂದು ಸೂಪರ್ ಹಿಟ್ ಚಿತ್ರ ಆಗೋದ್ರಲ್ಲಿ ಡೌಟೆ ಇಲ್ಲ.

About Author

Leave a Reply

Your email address will not be published. Required fields are marked *