ಲಾಕ್’ಡೌನ್ ವೇಳೆ ಅನಗತ್ಯವಾಗಿ ಓಡಾಡಿದರೆ ಕ್ರಿಮಿನಲ್ ಮೊಕದಮ್ಮೆ: ಡಿಸಿಪಿ ಡಾ. ಎ.ಎನ್ ಪ್ರಕಾಶ್ ಗೌಡ
1 min readಮೈಸೂರು: ಲಾಕ್ ಡೌನ್ ವೇಳೆ ಅನಗತ್ಯವಾಗಿ ಓಡಾಡಿದ್ದು ರುಜುವಾತಾದರೆ ಕ್ರಿಮಿನಲ್ ಮೊಕದಮ್ಮೆ ದಾಖಲಿಸಲಾಗುವುದು. ಜಪ್ತಿಯಾದ ವಾಹನಗಳನ್ನು ನ್ಯಾಯಾಲಯದ ಮೂಲಕವೇ ವಾಪಸ್ಸು ಪಡೆಯಬೇಕು ಎಂದು ಮೈಸೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ ಎ ಎನ್ ಪ್ರಕಾಶ್ ಗೌಡ ಹೇಳಿದ್ದಾರೆ.
ಜಪ್ತಿ ಮಾಡಿದ ವಾಹನಗಳನ್ನು ಲಾಕ್ಡೌನ್ ಅವಧಿ ಮುಗಿಯುವವರೆಗೂ ವಾಪಸ್ಸು ಕೊಡುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿಚಾರ:
ಲಾಕ್ಡೌನ್ ವೇಳೆಯಲ್ಲಿ ಮಸಾಜ್ ಪಾರ್ಲರ್ ಗಳಿಗೂ ನಿರ್ಬಂಧವಿದೆ. ದಾಳಿ ಸಂದರ್ಭದಲ್ಲಿ ಲಾಕ್ಡೌನ್ ವೇಳೆಯಲ್ಲೇ ಮಸಾಜ್ಗೆ ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಈ ರೀತಿ ಬರುವವರ ವಿರುದ್ದವೂ ಪ್ರಕರಣ ದಾಖಲಿಸಲಾಗುವುದು. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಡಿಸಿಪಿ ಪ್ರಕಾಶ್ ಗೌಡ ಅವರು ಹೇಳಿಕೆ ನೀಡಿದ್ದಾರೆ.