ಹಿರಿಯ ಕ್ರೈಮ್ ವರದಿಗಾರ ಸುನೀಲ್ ಹೆಗ್ಗರವಳ್ಳಿ ನಿಧನ
1 min readಚಿಕ್ಕಮಗಳೂರು: ಹಿರಿಯ ಕ್ರೈಮ್ ವರದಿಗಾರ, ಸುನೀಲ್ ಹೆಗ್ಗರವಳ್ಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹಾಯ್ ಬೆಂಗಳೂರು ಪತ್ರಿಕೆ ಪತ್ರಿಕೆ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಸುನೀಲ್ ಹೆಗ್ಗರವಳ್ಳಿ ತಮ್ಮ ಸ್ವಂತ ಜಿಲ್ಲೆಯಾದ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಾಯ್ ಬೆಂಗಳೂರು ಪತ್ರಿಕೆಯ ವರದಿಗಾರರಾಗಿ ಅವರು ಮಾಡಿದ ಸಾಕಷ್ಟು ವರದಿಗಳು ದೊಡ್ಡ ಸಂಚಲನವನ್ನೇ ಮೂಡಿಸಿದ್ದವು. ರವಿ ಬೆಳಗೆರೆಯವರ ಅತ್ಯಾಪ್ತನಾಗಿದ್ದುಕೊಂಡು ನಂತರ ಅನಾರೋಗ್ಯದ ಸನ್ನಿವೇಶದಲ್ಲಿ ಪತ್ರಿಕೆಯನ್ನು ಸಂಪಾದಕನಾಗಿ ಮುನ್ನಡೆಸಿದ್ದರು.
ಶೂಟೌಟ್ ವಿವಾದದ ಸನ್ನಿವೇಶದಲ್ಲಿ ರವಿ ಬೆಳಗೆರೆ ಅವರ ಮೇಲೆಯೇ ಸುಪಾರಿ ಆರೋಪ ಮಾಡಿ ಹಾಯ್ ಬೆಂಗಳೂರು ಕಚೇರಿಯಿಂದ ಹೊರಬಿದ್ದಿದ್ದರು ಹೆಗ್ಗರವಳ್ಳಿ. ನಂತರ ಚಾರ್ಲಿ ಟೈಮ್ಸ್ ಕ್ರೈಮ್ ಪೇಪರ್ ಶುರುಮಾಡಿದ್ರು. ಯೂ ಟ್ಯೂಬ್ ಚಾನೆಲ್ ಕೂಡ ಆರಂಭಿಸಿ ಗಮನ ಸೆಳೆದಿದ್ದರು.