ಮೈಸೂರಿನಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ತಪಾಸಣೆ!

1 min read

ಮೈಸೂರಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣದ ಸಾವಿನ ಪ್ರಮಾಣ ಏರುತ್ತಲೇ ಇದೆ. ಪಾಸಿಟಿವ್ ಪ್ರಕರಣ ಕಡಿಮೆ ಆಗ್ತಿದ್ರು ಸಹ ಪಾಸಿಟಿವಿಟಿ ರೇಟ್ ಮಾತ್ರ ಇದ್ದಂಗೆ ಇದೆ.

ಇದ್ರಿಂದ ಮೈಸೂರು ಪಾಲಿಕೆ ಇದೀಗಾ ಮನೆ ಮನೆಗೆ ತೆರಳಿ ಕೋವಿಡ್ ತಪಾಸಣೆ ಮಾಡಲು ಮುಂದಾಗಿದೆ. ಅದರಲ್ಲು ಕೋವಿಡ್ ಪ್ರಾಥಮಿಕ/ ದ್ವಿತೀಯ ಸಂಪರ್ಕ ಇರುವವರು ಹಾಗೂ ಕೋವಿಡ್ ರೋಗ ಲಕ್ಷಣಗಳು ಇರುವ ವ್ಯಕ್ತಿಗಳಿಗೆ ಪಾಲಿಕೆ ವತಿಯಿಂದಲೇ ಮನೆ-ಮನೆಗೆ ತೆರಳಿ ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತಿದೆ.

ಮೈಸೂರು ಪಾಲಿಕೆ ಮೊಬೈಲ್ ಟೀಂ

ಹೌದು ಇದಕ್ಕಾಗಿ ಮೈಸೂರಿನ ಎಲ್ಲಾ 9 ವಲಯ ಕಛೇರಿಗಳಿಗೆ ಪ್ರತ್ಯೇಕವಾಗಿ ಮೊಬೈಲ್ ತಂಡವನ್ನು ರಚಿಸಲಾಗಿದೆ. ಈ ಮುಖಾಂತರ ಕೋವಿಡ್ ಕೇರ್‌ಲೆಸ್ ಮಾಡಿ ಜೀವ ಕಳೆದುಕೊಳ್ಳುತ್ತಿರುವ ಹಾಗೂ ಕೋವಿಡ್ ತಪಾಸಣೆ ಮಾಡಿಸದೆ ಕಳ್ಳಾಟ ಆಡುತ್ತಿರುವವರಿಗೆ ಈ ಮೂಲಕ ಕಾರ್ಯಾರಂಭ ಶುರುವಾಗಿದೆ.

About Author

Leave a Reply

Your email address will not be published. Required fields are marked *