ಆ್ಯಂಬುಲೆನ್ಸ್’ನಲ್ಲೆ ಮಗುವಿಗೆ ಜನ್ಮ ನೀಡಿದ ಕೊರೋನ ಸೋಂಕಿತೆ
1 min readತಿ. ನರಸೀಪುರ: ಕೊರೋನ ಸೋಂಕಿತ ಮಹಿಳೆಯೊಬ್ಬರು ಆ್ಯಂಬುಲೆನ್ಸ್’ನಲ್ಲೆ ಮಗುವಿಗೆ ಜನ್ಮ ನೀಡಿದ ಹೃದಯ ವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ತಿ. ನರಸೀಪುರದ ಚಿಕ್ಕಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದ ಸವಿತಾ (26) ಮಗುವಿಗೆ ಜನ್ಮ ನೀಡಿದ ತಾಯಿ.
ಕೊರೋನ ಪಾಸಿಟಿವ್ ಹಿನ್ನಲೆ ಆಂಬುಲೆನ್ಸ್ ನಲ್ಲಿ ಕರೆದೊಯ್ಯಲು 108 ಆಂಬುಲೆನ್ಸ್ ಡ್ರೈವರ್ ಹಿಂದೇಟು ಹಾಕಿದ್ದ. ಬಳಿಕ ಅಧಿಕಾರಿಗಳ ಆದೇಶದ ಮೇರೆಗೆ ಮೈಸೂರಿಗೆ ಕರೆದೋಯ್ಯುವ ವೇಳೆ ಘಟನೆ ನಡೆದಿದೆ.
ಸದ್ಯ ವಿವಿ ಪುರಂ ಆಸ್ಪತ್ರೆಯಲ್ಲಿ ತಾಯಿ ಮಗು ಸುರಕ್ಷಿತವಾಗಿದೆ. ಹೆರಿಗೆ ವೇಳೆ ಸ್ಟಾಫ್ ನರ್ಸ್ ಮ್ಯಾನೇಜರ್ ಪ್ರಮೋದ್, ಕಾಂತರಾಜ್, ಪೈಲೇಟ್ ಕುಮಾರ್ ಉಪಸ್ಥಿತರಿದ್ದರು.