ರಾಜ್ಯದಲ್ಲೇ ಪ್ರಥಮ: ಚಾಮರಾಜನಗರದ ಈ ಕೋವಿಡ್ ಪ್ರಯೋಗ!
1 min readಚಾಮರಾಜನಗರ: ಜಿಲ್ಲೆಯಲ್ಲಿ ಹೊಸದಾದ ಪ್ರಯೋಗ ಶುರುವಾಗಿದ್ದು, ಕೋವಿಡ್ ಕರ್ತವ್ಯ ನಿರ್ವಹಣೆಯಲ್ಲಿ ಇರುವ ಕೊರೋನ ವಾರಿಯರ್ಸ್ ಗಳು ಕೋವಿಡ್ ಸೋಂಕಿಗೆ ತುತ್ತಾದಲ್ಲಿ ಅವರ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿದೆ.
ಚಾಮರಾಜನಗರದ ಮಾದಾಪುರ ಗ್ರಾಮದ ಬಳಿಯಿರುವ ವಿದ್ಯಾರ್ಥಿ ನಿಲಯದಲ್ಲಿ ಪ್ರತ್ಯೇಕವಾಗಿ ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯಲು ಸಿದ್ದತೆ ಆಗಿದ್ದು, ಈ ರೀತಿ ಪ್ರಯೋಗ ರಾಜ್ಯದಲ್ಲೇ ಪ್ರಥಮ ಎಂದು ಡಿಸಿ ರವಿ ಅವರು ತಿಳಿಸಿದ್ದಾರೆ.