ಕೊರೊನಾ ಕೇಂದ್ರವಾದ ಮೈಸೂರಿನ ಕೊಡಗಹಳ್ಳಿ
1 min readಮೈಸೂರು: ಮೈಸೂರಿನ ಟಿ.ನರಸೀಪುರ ತಾಲೂಕಿನ ಕೊಡಗಹಳ್ಳಿ ಗ್ರಾಮ ಇದೀಗ ಕೊರೊನಾ ಕೇಂದ್ರವಾಗಿದೆ.
ಕಾಶಿಯಾತ್ರೆ ಮಾಡಿ ಬಂದರಿಂದ ಸೋಂಕು ಹರಡಿದ್ದು ಹೆಣ ಹೆತ್ತಲೂ ಜನರಿಲ್ಲದಂತಾದ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಕಾಶಿಗೆ ಹೋಗಿ ಬಂದ 20 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು. ಇದೀಗ ಟೆಸ್ಟ್ ಕೊಟ್ಟ ಊರಿನ 800 ಮಂದಿಯಲ್ಲಿ 185 ಮಂದಿಗೆ ಪಾಸಿಟಿವ್ ಬಂದಿದೆ.
ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು ಹೆಣ ಹೆತ್ತಲೂ ಜನರಿಲ್ಲದಂತಾದ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಗ್ರಾಮದ ಮಹದೇವಪ್ಪ ಕರೊನಾಗೆ ಸಾವನ್ನಪ್ಪಿದ್ದು ಮಕ್ಕಳು ಇಲ್ಲದೆ ಸಂಬಂಧಿಕರೂ ಇಲ್ಲದೆ ಮೃತದೇಹ ಅನಾಥವಾಗಿ ಬಿದ್ದಿತ್ತು. ಗ್ರಾಮದ ಜನರು ಕೂಡ ಶವ ಮುಟ್ಟಲು ಭಯದಿಂದ ದೂರ ಉಳಿದಿದ್ದರು. ಎರಡು ದಿನದ ನಂತರ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲಾಗಿದೆ.