ಮೈಸೂರಿನಲ್ಲಿ ಕೊರೊನಾ ಮೂರನೇ ಅಲೆ ಬಗ್ಗೆ ತಪ್ಪು ಮಾಹಿತಿ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
1 min readಮೈಸೂರು: ಮೈಸೂರು ಜಿಲ್ಲೆಯಲ್ಲಿ ಮಕ್ಕಳಲ್ಲಿ ಕೊರೊನಾ ಹೆಚ್ಚಿದೆ ಅನ್ನೋ ವದಂತಿ ಹಬ್ಬಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಕೆ ಎಚ್ ಪ್ರಸಾದ್ ಅವರು ವದಂತಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ರೀತಿಯ ಮಾಹಿತಿ ಸರಿಯಲ್ಲ ಅಂತ ಕೊರೊನಾದ ಅಂಕಿ ಅಂಶಗಳ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಮಾರ್ಚ್ 2020 ರಿಂದ ಜೂನ್ 2021 ರವರೆಗೆ 1 ಲಕ್ಷದ 63 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 0 – 10 ವರ್ಷದ ಮಕ್ಕಳಲ್ಲಿ ಶೇಖಡಾ 2 ರಿಂದ 3 ರಷ್ಟು ಪ್ರಮಾಣದಲ್ಲಿ ಪಾಸಿಟಿವ್ ಇತ್ತು. ಜೂನ್ 2021 ರಲ್ಲಿ 19 ಸಾವಿರ ಪಾಸಿಟಿವ್ ಇದರಲ್ಲಿ 700 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಶೇಕಡ ಮೂರರಷ್ಟು ಮಕ್ಕಳಿಗೆ ಮಾತ್ರ ಸೋಂಕು ಕಂಡುಬಂದಿದೆ ಅಂತ ತಿಳಿಸಿದ್ದಾರೆ.
ಅಲ್ಲದೆ ಮಕ್ಕಳ ಸಾವಿನ ಪ್ರಮಾಣದ ಬಗ್ಗೆಯು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. 16 ತಿಂಗಳಲ್ಲಿ 0 – 10 ವರ್ಷದ 9 ಮಕ್ಕಳು ಸಾವನ್ನಪ್ಪಿವೆ. 9 ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗಿದೆ. ಆ ಮಕ್ಕಳಿಗೆ ಕೋವಿಡ್ ಜೊತೆ ಬೇರೆ ಆರೋಗ್ಯದ ಸಮಸ್ಯೆ ಇತ್ತು. ಆದ್ದರಿಂದ ಮೈಸೂರು ಜಿಲ್ಲೆಯಲ್ಲಿ ಮೂರನೇ ಅಲೆ ಅನ್ನೋ ಮಾಹಿತಿ ತಪ್ಪು ಬರುತ್ತಿದೆ ಅಂತ ಪತ್ರಿಕಾ ಪ್ರಕಟಣೆ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.