ಮೈಸೂರಿನಲ್ಲಿ ಮುಂದುವರಿದ ಲಾಕ್‌ಡೌನ್; ಕ್ರೀಡಾ ಸಾಮಗ್ರಿಗಳ ಅಂಗಡಿ ತೆರೆಯಲು ಮನವಿ
1 min readಮೈಸೂರು: ಮೈಸೂರಿನಲ್ಲಿ ಲಾಕ್‌ಡೌನ್ ಮುಂದುವರಿದ ಬೆನ್ನಲೆ ಕ್ರೀಡಾ ಸಾಮಗ್ರಿಗಳ ಅಂಗಡಿ ತೆರೆಯಲು ವ್ಯಾಪಾರಿಗಳು ಮನವಿ ಸಲ್ಲಿಸಿದ್ದಾರೆ.
ಸಂಸದ ಪ್ರತಾಪಸಿಂಹಗೆ ವ್ಯಾಪಾರಿಗಳು ಮನವಿ ಸಲ್ಲಿಸಿದ್ದು, ಕಳೆದ 50 ದಿನದಿಂದ ಕ್ರೀಡಾ ಸಾಮಾಗ್ರಿಗಳ ಅಂಗಡಿ ಬಂದ್ ಆಗಿದೆ. ಕನಿಷ್ಠ ಕೇರಂ ಚೆಸ್ ಒಳಾಂಗಣ ಕ್ರೀಡೆಯ ಪರಿಕರ ಮಾರಲು ಅವಕಾಶ ನೀಡಿ. ಕೊರೊನಾ ನಿಯಮ ಪಾಲಿಸಿ ವ್ಯಾಪಾರ ಮಾಡುತ್ತೇವೆ. ಸಮಯ ನಿಗದಿ ಮಾಡಿ ಅವಕಾಶ ನೀಡಿ ಅಂತ ಸಂಸದ ಪ್ರತಾಪಸಿಂಹಗೆ ವ್ಯಾಪಾರಿಗಳು ಮನವಿ ಪತ್ರ ನೀಡಿದ್ದಾರೆ.