ಬೆಟ್ಟದ ತಪ್ಪಲಿನ 3 ಸರ್ವೇಗಳ ಆಸ್ತಿ ಮೈಸೂರು ಮಹಾರಾಜರದ್ದು’ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂಕೋರ್ಟ್!

1 min read

ಚಾಮುಂಡಿಬೆಟ್ಟ ತಪ್ಪಲಿನ ಕುರುಬಾರಹಳ್ಳಿ, ಆಲನಹಳ್ಳಿ, ಚೌಡಹಳ್ಳಿ ಭೂ ಮಾಲೀಕತ್ವ ವಿವಾದದ ಮೇಲ್ಮನವಿಯನ್ನ ಸುಪ್ರೀಂ ಕೋರ್ಟ್ ತಿರಸ್ಕಾರ ಮಾಡಿದೆ. ಈ‌ ಮೂಲಕ ಮೈಸೂರಿನ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಹಾಗೂ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿ ಸುಪ್ರೀಂಕೋರ್ಟ್ ಹಿಂದಿನ ಆದೇಶ ಎತ್ತಿ ಹಿಡಿದಿದೆ. ಹೌದು ಈ ಮೂರು ಸರ್ವೇ ನಂಬರ್ ಗಳಿಗೆ ಸೇರಿದ ಭೂಮಿ ಮಹಾರಾಜರ ಖಾಸಗಿ ಆಸ್ತಿಯೆಂದು ಹೈಕೋರ್ಟ್ ವಿಭಾಗೀಯ ಪೀಠ ಕಳೆದ ವರ್ಷವೇ ತೀರ್ಪು ನೀಡಿತ್ತು. ಆದರು ಹೈಕೋರ್ಟ್‌ನ ಈ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಹಾಕಿದ್ದ ಭೂ ಮಾಲೀಕರು ಹೋಗಿದ್ದರು.

ಚಾಮುಂಡಿ ಬೆಟ್ಟದ ತಪ್ಪಲು

ಈ ವೇಳೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಡಿಸಿ ರೋಹಿಣಿ ಸಿಂಧೂರಿಗೆ ಮುಖಭಂಗವಾಗಿದ್ದು ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಉದಯ್ ಲಲಿತ್ ಹಾಗೂ ಅಜಯ್ ರಸ್ತೋಗಿ ಇದು ವಿಚಾರಣೆಗೆ ಯೋಗ್ಯವಲ್ಲವೆಂದು ಮೇಲ್ಮನವಿ ತಿರಸ್ಕಾರ ಮಾಡಿದೆ. ಅಲ್ಲದೆ ಕಳೆದ ಎರಡು ದಶಕಗಳಿಂದ ಸರ್ಕಾರ ಮತ್ತು ಭೂ ಮಾಲೀಕರ ನಡುವೆ ನಡೆಯುತ್ತಿದ್ದ ಕಾನೂನು ಸಮರಕ್ಕೆ ತೆರೆ ಬಿದ್ದಿದ್ದು 3 ಸರ್ವೇ ನಂಬರ್ ಗಳಿಂದ 1450 ಎಕರೆಯಷ್ಟು ಇರೊ ಭೂಮಿ ಮೈಸೂರು ಮಹಾರಾಜರ ಖಾಸಗಿ ಎಂದೇ ತೀರ್ಮಾನ ಮಾಡಿ ಹೈಕೋರ್ಟ್ ಆದೇಶ ಎತ್ತಿಹಿಡಿದಿದೆ.

About Author

Leave a Reply

Your email address will not be published. Required fields are marked *