ಸಿಇಟಿ ಪರೀಕ್ಷೆ:‌ ರಾಜ್ಯಕ್ಕೆ ಮೈಸೂರಿನ ಮೇಘನ್ ಫಸ್ಟ್

1 min read

ಮೈಸೂರು,ಸೆ.20-ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಮೈಸೂರಿನ ಎಚ್.ಕೆ.ಮೇಘನ್ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಬಂದಿದ್ದಾರೆ.
ನಗರದ ಕುವೆಂಪುನಗರದಲ್ಲಿರುವ ಪ್ರಮತಿ ಕಾಲೇಜಿನಲ್ಲಿ ಸಿಬಿಎಸ್ಇ ವ್ಯಾಸಂಗ ಮಾಡಿದ್ದ ಮೇಘನ್ 500 ಅಂಕಗಳಿಗೆ 494 ಅಂಕ ಗಳಿಸಿದ್ದಾರೆ.
ಮೇಘನ್ ಅವರ ತಂದೆ-ತಾಯಿ ಇಬ್ಬರು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಂದೆ ಕೃಷ್ಣಯ್ಯ ಅವರು ಕೆ.ಆರ್.ನಗರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ತಾಯಿ ಲೀಲಾವತಿ ರಾಮಕೃಷ್ಣನಗರದ ಕಾಲೇಜವೊಂದರಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಬಗ್ಗೆ ಸಂತೋಷ ಹಂಚಿಕೊಂಡಿರುವ ಮೇಘನ್, ಎರಡೂವರೆ ವರ್ಷದ ಶ್ರಮ ಈಗ ಫಲ ನೀಡಿದೆ. ತುಂಬಾ ಖುಷಿಯಾಗುತ್ತಿದೆ. ಆಕಾಶ್ ಇನ್ಸ್ಟಿಟ್ಯೂಟ್ ನಲ್ಲಿ ಕೋಚಿಂಗ್ ಪಡೆದಿದ್ದೇನೆ. ಕೃಷಿ, ಬಿ- ಫಾರ್ಮ, ಪಶುಸಂಗೋಪನೆ, ಇಂಜಿನಿಯರಿಂಗ್ ಮತ್ತು ನ್ಯಾಚುರೋಪತಿ ಯಲ್ಲಿ ರ್ಯಾಂಕ್ ಪಡೆದಿದ್ದೇನೆ. ಮುಂದೆ ವೈದ್ಯನಾಗುವ ಆಸೆ ಇದ್ದು, ನೀಟ್ ಪರೀಕ್ಷೆ ಬರೆದಿದ್ದೇನೆ ಎಂದರು.
ಪೋಷಕರು ಕೂಡ ಶಿಕ್ಷಕರಾಗಿದ್ದು, ೨೫ ವರ್ಷದಿಂದ ಪಾಠ ಮಾಡುತ್ತಿದ್ದಾರೆ. ಪ್ರತಿ ಹೆಜ್ಜೆಯಲ್ಲೂ ತಂದೆ ತಾಯಿ ಇದ್ದರು ಎಂದರು.‌

About Author

Leave a Reply

Your email address will not be published. Required fields are marked *