ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ..! ಐಎಎಸ್ ಅಧಿಕಾರಿ ಪರ ಆನ್ಲೈನ್ ಕ್ಯಾಂಪೇನ್
1 min readಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ಆನ್ಲೈನ್ ಕ್ಯಾಂಪೇನ್ ಒಂದು ನಡೆಯುತ್ತಿದ್ದು, ರೋಹಿಣಿ ಸಿಂಧೂರಿಯನ್ನ ಮತ್ತೆ ಮೈಸೂರಿಗೆ ಡಿಸಿಯಾಗಿ ನೇಮಿಸುವಂತೆ ಒತ್ತಾಯ ಮಾಡಲಾಗುತ್ತಿದೆ.
“ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ” ಸಹಿ ಸಂಗ್ರಹ ಅಭಿಯಾನವನ್ನ ‘ಚೇಂಜ್ ಆರ್ಗ್’ ಸಾಮಾಜಿಕ ಮಾಧ್ಯಮದಲ್ಲಿ ಆರಂಭಿಸಲಾಗಿದೆ. ಈಗಾಗಲೇ ಸುಮಾರು 26 ಸಾವಿರ ಜನರಿಂದ ಸಹಿ ಸಂಗ್ರಹಿಸಲಾಗಿದೆ.
ರೋಹಿಣಿ ಸಿಂಧುರಿಯನ್ನು ಮರಳಿ ಮೈಸೂರಿಗೆ ನೇಮಿಸುವಂತೆ ಸಹಿ ಸಂಗ್ರಹ ಅಭಿಯಾನದ ಮೂಲಕ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಗೆ ಮನವಿ ಮಾಡಲಾಗುತ್ತಿದೆ. ಭೂ ಮಾಫಿಯಾದ ಬಲಿಪಶು ಎಂದು ಹೇಳಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗಿದೆ. 35 ಸಾವಿರ ಸಹಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದು ಅಭಿಯಾನ ಮುಂದುವರೆದಿದೆ
ಸಹಿ ಸಂಗ್ರಹ ಅಭಿಯಾನ: https://www.change.org/p/mysore-residents-bring-back-rohini-sindhuri