ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗ ದಾನ: ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ರವಾನೆ
1 min readಮೈಸೂರು: ಮೆದುಳು ನಿಷ್ಕ್ರಿಯ ಗೊಂಡಿದ್ದ ವ್ಯಕ್ತಿಯ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದು ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಈ ಮೂಲಕ ಮೈಸೂರಿನಲ್ಲಿ ಮತ್ತೊಂದು ಅಂಗಾಂಗಗಳ ದಾನ ಪ್ರಕರಣ ನಡೆದಿದೆ.
ಕೃಷಿಕರಾಗಿದ್ದ ಮದ್ದೂರು ತಾಲೂಕಿನ ಅಜ್ಜಹಳ್ಳಿ ಗ್ರಾಮದ ನಿವಾಸಿ ರಾಮಕೃಷ್ಣ (50) ಅವರಿಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಳಿ ಸಂಬವಿಸಿದ್ದ ರಸ್ತೆ ಅಪಘಾತದಲ್ಲಿ ಗಂಬೀರವಾಗಿ ಗಾಯಗೊಂಡಿದ್ದರು. ಆಸ್ಪ್ತರೆಗೆ ದಾಖಲಿಸಿದ್ದ ಇವರ ಮೆದುಳು ನಿಷ್ಕ್ರಿಯ ಗೊಂಡಿತ್ತು. ಹೀಗಾಗಿ ರಾಮಕೃಷ್ಣ ಅವರ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡಿದ್ದಾರೆ.
ಮೈಸೂರಿನಿಂದ ಬೆಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಮೈಸೂರಿನ ಸುಯೊಗ್ ಆಸ್ಪತ್ರೆಯಿಂದ ಬೆಂಗಳೂರು ಖಾಸಗಿ ಆಸ್ಪತ್ರೆ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದೇಹ ರವಾನೆ ಮಾಡಲಾಗಿದೆ. ಬೆಂಗಳೂರಿನವರಗೆ ಜೀರೋ ಟ್ರಾಫಿಕ್ ಮೂಲಕ ದೇಹ ರವಾನೆಯಾಗಿದೆ. ಸುಯೋಗ್ ಆಸ್ಪತ್ರೆಗೆ ಖುದ್ದು ಬಿಜಿಎಸ್ ವೈದ್ಯರ ತಂಡ ಆಗಮಿಸಿತ್ತು.
ಇನ್ನು ರಾಮಕೃಷ್ಣ ಅವರ ದೇಹವನ್ನು ಖಾಸಗಿ ಆಂಬ್ಯುಲೆನ್ಸ್ ಚಾಲಕ ದರ್ಶನ್ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಆಂಬ್ಯುಲೆನ್ಸ್ ಚಾಲನೆ ಮಾಡುತ್ತಿರುವ ದರ್ಶನ್ ಅವರು ಇದು ಎರಡನೇ ಬಾರಿ ಮೈಸೂರಿನಿಂದ ಅಂಗಾಗ ದಾನದಲ್ಲಿ ಭಾಗಿಯಾಗಿದ್ದಾರೆ.