ತುರ್ತು ಆಕ್ಸಿಜನ್ ಸೌಲಭ್ಯಕ್ಕೆ ‘ಆಕ್ಸಿಜನ್ ಆನ್ ವ್ಹೀಲ್ಸ್’ ಬಸ್
1 min readಬೆಂಗಳೂರು: ಕೋವಿಡ್ ಸೋಂಕಿತರಿಗೆ ತುರ್ತಾಗಿ ಆಕ್ಸಿಜನ್ ಕೊರತೆ ನೀಗಿಸಲು ಬಿಎಂಟಿಸಿ ಸಂಸ್ಥೆಯು’ ಫೌಂಡೇಶನ್ ಆಫ್ ಇಂಡಿಯಾ’ ಸ್ವಯಂಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ ಬಸ್ಸಿನಲ್ಲಿ ಪ್ರಾಯೋಗಿಕವಾಗಿ `ಆಕ್ಸಿಜನ್ ಆನ್ ವ್ಹೀಲ್ಸ್’ ಎಂಬ ಹೆಸರಿನ ಮೊಬೈಲ್ ಆಕ್ಸಿಜನ್ ಘಟಕವನ್ನು ಇಂದಿನಿಂದ ಪ್ರಾರಂಭಿಸಲಾಗಿದೆ.
ಇದು ಉಚಿತ ಸೇವೆಯಾಗಿದ್ದು, ಇದು ರೋಗಿಗಳ ಪಾಲಿಗೆ ಸಂಜೀವಿನಿಯಾಗಲಿದ್ದು ಇದನ್ನ ಸಿಎಂ ಹಾಗೂ ಸಾರಿಗೆ ಸಚಿವರು ಚಾಲನೆ ನೀಡಿದ್ದಾರೆ. ಆಕ್ಸಿಜನ್ ಸಮಸ್ಯೆಯಿಂದ ರಸ್ತೆಯ ಪಕ್ಕದ ಆಟೋದಲ್ಲಿ ಕಾರಿನಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಿಕೊಂಡಿದ್ದನ್ನು ನಾವು ಗಮನಿಸಿದ್ದೇವೆ. ಈ ವೇಳೆ ಬೆಂಗಳೂರಲ್ಲಿ ಇದೀಗಾ ಬಸ್ ನಲ್ಲಿ ಆಕ್ಸಿಜನ್ ಸೇವೆ ಶುರುವಾಗಿರೋದು ಒಂದು ಹಂತಕ್ಕೆ ಸಮಾಧಾನ ಉಂಟು ಮಾಡಿದೆ.