ಮೈಸೂರಿನಲ್ಲಿ ಮೂವರು ಬೈಕ್ ಕಳ್ಳರ ಬಂಧನ- 9 ಬೈಕ್ ವಶಕ್ಕೆ!

1 min read

ಮೈಸೂರಿನ ವಿವಿ ಪುರಂ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಬೈಕ್ ಕಳ್ಳರನ್ನ ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 5.32 ಲಕ್ಷ ಮೌಲ್ಯದ 9 ಬೈಕ್ ಗಳನ್ನ ವಶಪಡಿಸಿಕೊಂಡಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳನ್ನ ಬಂಧಿಸಲಾಗಿತ್ತು. ಈ ಪೈಕಿ ಕಾನೂನು ಸಂಘರ್ಷಕ್ಕೆ ಒಳಗಾದ ಮೂವರು ಬಾಲಕರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಮಂತ್(20), ಗಿರೀಶ್( 19) ಹಾಗೂ ಮನು(20) ಬಂಧಿತ ಆರೋಪಿಗಳನ್ನ ಬಂಧಿಸಿದ್ದು‌ ಈ ಮೂಲಕ ಮೈಸೂರಿನ ವಿವಿಧ ಠಾಣೆಯ 9 ಕಳುವು ಪ್ರಕರಣಗಳನ್ನ ಬೇಧಿಸಲಾಗಿದೆ. ಪ್ರಕರಣದಲ್ಲಿ ಡಿಸಿಪಿ ಗಳಾದ ಪ್ರದೀಪ್ ಗುಂಟಿ, ಗೀತಾಪ್ರಸನ್ನ ರವರ ಮಾರ್ಗದರ್ಶನದಲ್ಲಿ ಹಾಗೂ ಎಸಿಪಿ ಶಿವಶಂಕರ್ ಉಸ್ತುವಾರಿಯಲ್ಲಿ ವಿವಿ ಪುರಂ ಠಾಣೆಯ ಇನ್ಸ್ ಪೆಕ್ಟರ್ ವೆಂಕಟೇಶ್ ಎಸ್ಸೈ ಗಳಾದ ಲೇಪಾಕ್ಷ, ರಾಧಾ.ಎಂ ಹಾಗೂ ಜ್ಯೋತ್ಸ್ನಾರಾಜ್ ಕಾರ್ಯಾಚರಣೆ ನಡೆಸಿದ್ದಾರೆ.

About Author

Leave a Reply

Your email address will not be published. Required fields are marked *