ಮೈಸೂರಿನಲ್ಲಿ ಮೂವರು ಬೈಕ್ ಕಳ್ಳರ ಬಂಧನ- 9 ಬೈಕ್ ವಶಕ್ಕೆ!
1 min readಮೈಸೂರಿನ ವಿವಿ ಪುರಂ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಬೈಕ್ ಕಳ್ಳರನ್ನ ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 5.32 ಲಕ್ಷ ಮೌಲ್ಯದ 9 ಬೈಕ್ ಗಳನ್ನ ವಶಪಡಿಸಿಕೊಂಡಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳನ್ನ ಬಂಧಿಸಲಾಗಿತ್ತು. ಈ ಪೈಕಿ ಕಾನೂನು ಸಂಘರ್ಷಕ್ಕೆ ಒಳಗಾದ ಮೂವರು ಬಾಲಕರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಮಂತ್(20), ಗಿರೀಶ್( 19) ಹಾಗೂ ಮನು(20) ಬಂಧಿತ ಆರೋಪಿಗಳನ್ನ ಬಂಧಿಸಿದ್ದು ಈ ಮೂಲಕ ಮೈಸೂರಿನ ವಿವಿಧ ಠಾಣೆಯ 9 ಕಳುವು ಪ್ರಕರಣಗಳನ್ನ ಬೇಧಿಸಲಾಗಿದೆ. ಪ್ರಕರಣದಲ್ಲಿ ಡಿಸಿಪಿ ಗಳಾದ ಪ್ರದೀಪ್ ಗುಂಟಿ, ಗೀತಾಪ್ರಸನ್ನ ರವರ ಮಾರ್ಗದರ್ಶನದಲ್ಲಿ ಹಾಗೂ ಎಸಿಪಿ ಶಿವಶಂಕರ್ ಉಸ್ತುವಾರಿಯಲ್ಲಿ ವಿವಿ ಪುರಂ ಠಾಣೆಯ ಇನ್ಸ್ ಪೆಕ್ಟರ್ ವೆಂಕಟೇಶ್ ಎಸ್ಸೈ ಗಳಾದ ಲೇಪಾಕ್ಷ, ರಾಧಾ.ಎಂ ಹಾಗೂ ಜ್ಯೋತ್ಸ್ನಾರಾಜ್ ಕಾರ್ಯಾಚರಣೆ ನಡೆಸಿದ್ದಾರೆ.