ಮೈಸೂರಿನಲ್ಲಿ ಬೈಕ್ಗೆ ಗುದ್ದಿದ ಆಂಬ್ಯುಲೆನ್ಸ್ ವಾಹನ- ವ್ಯಕ್ತಿಗೆ ಗಾಯ!
1 min readಮೈಸೂರು : ಮೈಸೂರಿನಲ್ಲಿ ಆ್ಯಂಬುಲೆನ್ಸ್ ವ್ಯಾನ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಮೈಸೂರು ಕೆ.ಆರ್.ಎಸ್ ರಸ್ತೆಯಲ್ಲಿ ಅಪಘಾತ ನಡೆದಿದ್ದು, ಆ್ಯಂಬುಲೆನ್ಸ್ ಚಾಲಕನ ಬದಲು ಸೆಕ್ಯುರಿಟಿಯೊರ್ವ ಕಾರು ಚಾಲನೆ ಮಾಡಿದ್ದ ಎನ್ನಲಾಗಿದೆ.
ಖಾಸಗಿ ಕಂಪನಿಯ ಆ್ಯಂಬುಲೆನ್ಸ್ ಸಿಬ್ಬಂದಿಗೆ ಹುಷಾರಿಲ್ಲದ ಕಾರಣ ವಾಹನ ಚಾಲನೆ ಮಾಡಿದ್ದು ಈ ವೇಳೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸದ್ಯ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.