ಅಧಿಪತ್ರ ಸಿನಿಮಾಗೆ ಭರ್ಜರಿ ಡಿಮ್ಯಾಂಡ್… ಭಾರೀ‌ ಮೊತ್ತಕ್ಕೆ ಸೇಲ್ ಆಯ್ತು ಆಡಿಯೋ ರೈಟ್ಸ್

1 min read

ಸಿನಿಮಾ: ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆಯ‌ ಬಹು ನಿರೀಕ್ಷಿತ ಸಿನಿಮಾ ಅಧಿಪತ್ರ. ಈಗಾಗಲೇ ಮೇಕಿಂಗ್ ಹಾಗೂ ಕಂಟೆಂಟ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಆಡಿಯೋ ಹಕ್ಕು ಪ್ರತಿಷ್ಠಿತ ಆಡಿಯೋ‌ ಸಂಸ್ಥೆ ಲಹರಿ ಖರೀದಿ ಮಾಡಿದೆ. 2024 ಬಹು ನಿರೀಕ್ಷಿತ ಸಿನಿಮಾ ಸಾಲಿನಲ್ಲಿ ಅಧಿಪತ್ರ ಕೂಡ ಒಂದು.

ಮೇ‌ 10ಕ್ಕೆ ಅಧಿಪತ್ರ ಟೀಸರ್

ಅಧಿಪತ್ರ ಸಿನಿಮಾದ ಶೂಟಿಂಗ್ ಹಾಗೂ ಮೇಕಿಂಗ್ನಿಂದಲೂ ಎಲ್ಲರ ಗಮನ ಸೆಳದಿದೇ . ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ತೆರೆಗೆ ಬರಲು ರೆಡಿಯಾಗ್ತಿರುವ ಅಧಿಪತ್ರ ಸಿನಿಮಾದ ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ. ಇದೇ ತಿಂಗಳ 10ರಂದು ಲಹರಿ ಆಡಿಯೋದಲ್ಲಿ ಅಧಿಪತ್ರದ ಮೊದಲ ಝಲಕ್ ಹೊರಬೀಳಲಿದೆ.

ಚಿತ್ರಕ್ಕೆ ಚಯನ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಚಿತ್ರ ಆಡ್ ಇಂಡಸ್ಟ್ರಿ ನಲ್ಲಿ ಕ್ರಿಯೇಟಿವ್ ಆಡ್ಸ್ ಮೂಲಕ ಗಮನ ಸೆಳೆದಿದ ಚಯನ್ ಶೆಟ್ಟಿ ಈಗ ಅಧಿಪತ್ರ ಆಕ್ಷನ್ ಕಟ್ ಹೇಳಿದ್ದಾರೆ , ರೂಪೇಶ್ ಗೆ ಜೋಡಿಯಾಗಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಸಾಥ್ ಕೊಟ್ಟಿದ್ದಾರೆ. ಕಾಂತಾರ ಖ್ಯಾತಿಯ ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ಎಂಕೆ‌ ಮಠ, ದೀಪಕ್ ರೈ, ಅನಿಲ್ ಉಪ್ಪಾಲ್, ಕಾರ್ತಿಕ್ ಭಟ್, ಪ್ರಶಾಂತ್ ತಾರಾಬಳಗದಲ್ಲಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಅಧಿಪತ್ರ ಸಿನಿಮಾವನ್ನು . ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್‌ನಡಿ‌ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮೇ ಗೌಡ ‌ಬಂಡವಾಳ ಹೂಡಿದ್ದು, ಕಾರ್ತಿಕ್ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಸಹ ನಿರ್ಮಾಣದಲ್ಲಿ ಹೆಗಲು ಕೊಟ್ಟಿದ್ದಾರೆ.

About Author

Leave a Reply

Your email address will not be published. Required fields are marked *