ನಟ ದುನಿಯಾ ವಿಜಯ್ ತಾಯಿ ನಿಧನ.!
1 min readನಟ ದುನಿಯಾ ವಿಜಯ್ ತಾಯಿ ನಿಧನ. ಕಳೆದ 20 ದಿನಗಳಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ನಾರಾಯಣಮ್ಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ನಟ ವಿಜಯ್ ತಾಯಿ ನಾರಾಯಣಮ್ಮ ಕರೋನಾದಿಂದ ಗುಣಮುಖರಾಗಿದ್ದರು. ಆದರೆ ಆದಾದ ಮೇಲೆ ಬ್ರೇನ್ ಸ್ಟ್ರೋಕ್ ಆಗಿ ಆರೋಗ್ಯ ಕ್ಷೀಣಿಸಿತ್ತು. ಅಲ್ಲದೆ ನಾನೂ ಮನೆಯಲ್ಲೇ ಚಿಕಿತ್ಸೆ ಪಡೆಯುವುದಾಗಿ ತಾಯಿ ನಾರಾಯಣಮ್ಮ ದುನಿಯಾ ವಿಜಿಗೆ ತಿಳಿಸಿದ್ದರು.
ಅಮ್ಮನ ಆಸೆಯಂತೆ ಮನೆಯಲ್ಲೇ ನಾರಾಯಣಮ್ಮನಿಗೆ ಚಿಕಿತ್ಸೆ ಕೊಡಿಸಲಾಗ್ತಿತ್ತು. ಆದರೆ ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ನಾರಾಯಣಮ್ಮ ಕೊನೆಯುಸಿರೆಳೆದಿದ್ದಾರೆ.ಈ ಬಗ್ಗೆ ಆಧಿಕೃತ ಮಾಹಿತಿ ತಿಳಿಸಿರುವ ದುನಿಯಾ ವಿಜಯ್, ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಾಯಿ ನಿಧನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ಮತ್ತೇ ಹುಟ್ಟಿ ಬಾ ಅಮ್ಮ ಎಂದು ಬರೆದುಕೊಂಡಿದ್ದಾರೆ.