ಗ್ಯಾಂಗ್ ರೇಪ್ ಪ್ರಕರಣ- ಐವರ ಬಂಧನ- ಇವರಲ್ಲಿ ಕ್ರಿಮಿನಲ್ ಹಿನ್ನಲೆ ಉಳ್ಳವರು ಇದ್ದಾರೆ- ಪ್ರವೀಣ್ ಸೂದ್ ಹೇಳಿಕೆ
1 min readಮೈಸೂರು : ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಐವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಇದಕ್ಕಾಗಿ ಬರೋಬ್ಬರಿ 100 ಪೊಲೀಸರನ್ನ ನಿಯೋಜನೆ ಮಾಡಿದ್ದು ಆರೋಪಿಗಳನ್ನ ತಮಿಳುನಾಡಿದ ಸತ್ಯಮಂಗಲದ ತಿರಪೂರ್ ಬಳಿ ವಶಕ್ಕೆ ಪಡೆದಿದ್ದಾರೆ. ಇಲ್ಲಿ ಮನೆಯಲ್ಲಿ ಅರಿತುಕೊಂಡಿದ್ದ ಆರೋಪಿಗಳನ್ನ ಪೊಲೀಸರು ಕಾರ್ಯಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಡಿಜಿ & ಐಜಿ ಪ್ರವೀಣ್ ಸೂದ್ ಅವರು ಕೂಡ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ವಿಕ್ಟಿಮ್ ಮಾಹಿತಿ ಕೊಟ್ಟಿರಲಿಲ್ಲ. ಆದರು ಕೂಡ ನಾವು ಪ್ರಕರಣದಲ್ಲಿ ಐವರನ್ನ ವಶಕ್ಕೆ ಪಡೆದಿದ್ದೇವೆ. ತಮಿಳುನಾಡಿನ ತಿರ್ಪೂರ್ನಲ್ಲಿದ್ದರು. ಇವರು ಎಲ್ಲರು ವಿದ್ಯಾರ್ಥಿಗಳು ಅಲ್ಲ. ಈ ಪ್ರಕರಣದಲ್ಲಿ 17 ವರ್ಷದ ಯುವಕ ಕೂಡ ಇದ್ದಾನೆ. ಎಲ್ಲರು ಕೂಡ 30 ವರ್ಷದೊಳಗಿನ ಯುವಕರು. ವಿದ್ಯುತ್ ಕೆಲಸ, ಗಾರೆ ಕೆಲಸ, ಕೂಲಿ ಕೆಲಸ, ತರಕಾರಿ ತರುತ್ತಿದ್ದ ಯುವಕರು. ಇವರಲ್ಲಿ ಕೆಲವರಿಗೆ ಕ್ರಿಮಿನಲ್ ಹಿನ್ನಲೆ ಇದೆ. ಯಾವುದೇ ಮಾಹಿತಿ ಇಲ್ಲದೆ ನಾವು ಪ್ರಕರಣ ಬೇಧಿಸಿದ್ದೇವೆ. ನಮ್ಮ ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ. ಜೊತೆಯಲ್ಲಿ ಐದು ಲಕ್ಷ ಬಹುಮಾನ ಕೂಡ ಪೊಲೀಸರ ತಂಡಕ್ಕೆ ಘೋಷಣೆ ಮಾಡಲಾಗಿದೆ