ಮೈಸೂರು : ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ!

1 min read

ಮೈಸೂರು : ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಗ್ರಾಮ ಲೆಕ್ಕಾಧಿಕಾರಿಯೊಬ್ಬ ಎಸಿಬಿ ಬಲೆಗೆ ಬಿದ್ದಿದ್ದು ಸಿಕ್ಕಿಬಿದ್ದ ಅಧಿಕಾರಿಯಿಂದ 7 ಸಾವಿರ ಹಣವನ್ನ ವಶಕ್ಕೆ ಪಡೆಯಲಾಗಿದೆ. ಎಸಿಬಿ ಡಿವೈಎಸ್ಪಿ ಪರಶುರಾಮಪ್ಪ ನೇತೃತ್ವದಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬನ್ನಿಕುಪ್ಪೆಯಲ್ಲಿ ಗ್ರಾ.ಪಂಗೆ ದಾಳಿ ಮಾಡಲಾಯಿತು. ಈ ವೇಳೆ‌ ಲಂಚ ಪಡೆಯುವಾಗ ಎಸಿಬಿ ಬಲೆಗೆ ರೆಡ್ ಹ್ಯಾಂಡ್‌ ಆಗಿ ಮಂಜುನಾಥ್ ಸಿಕ್ಕಿಬಿದ್ದಿದ್ದಾನೆ.

ಅಧಿಕಾರಿ ಮಂಜುನಾಥ್

ಬೋಗಚಾರಿ ಎಂಬುವವರ ಜಮೀನಿನ ಖಾತೆ ಮಾಡಿಕೊಡಲು ಮಂಜುನಾಥ್ 10 ಸಾವಿರ ಲಂಚ ಕೇಳಿದ್ದ. ಈ ಹಿನ್ನಲೆಯಲ್ಲಿ ಬೋಗಚಾರಿ ಮೈಸೂರಿನ ಎಸಿಬಿ ಕಚೇರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿ ಮಂಜುನಾಥ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

About Author

Leave a Reply

Your email address will not be published. Required fields are marked *