ಕೆಲಸವಿಲ್ಲದೇ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣು- ಜೀವನ ನಿರ್ವಹಣೆಗಿಂತ ಜೀವ ಮುಖ್ಯ- ಸ್ನೇಹಿತರೇ, ಹೀಗೆ ಮಾಡದಿರಿ.!
1 min readಕೋವಿಡ್ ಎಲ್ಲರ ಕೆಲಸವನ್ನು ಕಿತ್ತು ಕೊಳ್ಳುತ್ತಿದ್ದು, ಇದೀಗಾ ಜನರ ಪ್ರಾಣವನ್ನು ಕಿತ್ತುಕೊಳ್ಳುವ ಪರಿಸ್ಥಿತಿಗೆ ತದ್ದೊಡ್ಡುತ್ತಿದೆ. ಇದೇ ರೀತಿ ಲಾಕ್ಡೌನ್ ಎಫೆಕ್ಟ್ ನಿಂದ ಕೆಲಸವಿಲ್ಲದೇ ಮನೆಯಲ್ಲಿದ್ದು ಬೇಸತ್ತ ಯುವಕನೊಬ್ಬ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಟಿ.ಕೆ.ಲೇಔಟ್ ಬಡಾವಣೆಯ ನಿವಾಸಿ 24 ವರ್ಷದ ಭಾರ್ಗವ್ ಎಂಬಾತನೇ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ಭಾರ್ಗವ್ ಪೋಷಕರು ತರಕಾರಿ ಅಂಗಡಿಗೆ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ರೆ ಇತ್ತ ಭಾರ್ಗವ್ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಕಳೆದ ಎರಡೂವರೆ ತಿಂಗಳ ಲಾಕ್ಡೌನ್ನಿಂದಾಗಿ ಮೊಬೈಲ್ ಅಂಗಡಿ ಸಹ ಬಂದ್ ಆಗಿತ್ತು. ಇದ್ರಿಂದ ಬೇಸತ್ತು ಮನೆಯಲ್ಲೇ ಇರುತ್ತಿದ್ದ ಭಾರ್ಗವ್ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಘಟನೆ ಸಂಬಂಧ ಮೈಸೂರಿನ ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.