ಮೈಸೂರಲ್ಲಿ ಗಾರೆ ಕೆಲಸಕ್ಕೆ ಕೈ ಹಾಕಿದ ಚಿಕ್ಕಣ್ಣ.!
1 min readಮೈಸೂರು: ಎಷ್ಟೇ ದೊಡ್ಡವರಾದ್ರು ಬಂದಿದ್ ದಾರಿ ಮರೆಯಬಾರದು ಅಂತ ಅಣ್ಣಾವ್ರೇ ಹೇಳಿದ್ದಾರೆ. ಅದು ಜೀವನದ ಸಾರ ಎಂಬಂತೆ ಮೈಸೂರಿನಲ್ಲಿ ಕಾಮಿಡಿ ಕಿಂಗ್ ಚಿಕ್ಕಣ್ಣ ಸಂದೇಶ ಸಾರಿದ್ದಾರೆ. ಹೌದು, ಲಾಕ್‌ಡೌನ್ ಹಿನ್ನಲೆಯಲ್ಲಿ ಮೈಸೂರಿನ ತೋಟದ ಮನೆಯಲ್ಲಿರುವ ಚಿಕ್ಕಣ್ಣ ಇದೀಗಾ ಖುದ್ದು ತಮ್ಮ ತೋಟದ ಮನೆಯ ಗಾರೆ ಕೆಲಸಕ್ಕೆ ಕೈ ಹಾಕಿದ್ದಾರೆ.
ಇದು ನೋಡುಗರಿಗೆ ವಿಶೇಷ ಅನಿಸಿದ್ರು, ಚಿಕ್ಕಣ್ಣ ತನ್ನ ಹಳೆಯ ದಿನಗಳನ್ನ ಮೆಲಕು ಹಾಕಿದಂತೆವ ಭಾಸವಾಗಿದೆ. ವಿಶೇಷ ಅಂದ್ರೆ ಚಿಕ್ಕಣ್ಣ ಕಳೆದ ಎರಡು ವಾರದಿಂದ ಮೈಸೂರಿನ ತೋಟದ ಮನೆಯಲ್ಲೇ ಬೀಡು ಬಿಟ್ಟಿದ್ದು ಸಾಕು ಪ್ರಾಣಿಗಳನ್ನ ನೋಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಇದೇವೇಳೆ ತೋಟದ ಮನೆಯಲ್ಲಿ ಶೌಚಾಲಯದ ಕಟ್ಟಡ ನಿರ್ಮಾಣ ಆಗುತ್ತಿದ್ದು ಖುದ್ದು ಚಿಕ್ಕಣ್ಣ ಅದರ ಗಾರೆ ಕೆಲಸ ಮಾಡಿ ತನ್ನ ದಾರಿಯನ್ನ ಮತ್ತೇ ನೆನಪಿಸಿಕೊಂಡಿದ್ದಾರೆ.
ಸ್ವಲ್ಪ ಎನಾದ್ರು ಜೀವನದಲ್ಲಿ ಬಂದ್ರೆ ಸಾಕು ಗತ್ತು’ ದೌಲತ್ತು ತೋರಿಸೋ ಜನರ ಮಧ್ಯೆ ಚಿಕ್ಕಣ್ಣನಂತ ಸರಳ ಜೀವಿಯನ್ನ ನೋಡಿ ವಾವ್ ಸೂಪರ್ ಈ ವ್ಯಕ್ತಿ ಅನ್ನೋ ಹಾಗೆ ಮಾತಾಡುತ್ತಿದ್ದಾರೆ ಜನರು.