ಪತ್ರಕರ್ತರ ಸಹಾಯ ನಿಧಿ ಹೆಚ್ಚಳ.!
1 min readಪತ್ರಕರ್ತರ ಆರೋಗ್ಯ ಸಹಾಯ ನಿಧಿ 50ಲಕ್ಷಕ್ಕೆ ಹೆಚ್ಚಳ!
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರಿಗೆ ಆರೋಗ್ಯದ ದೃಷ್ಟಿಯಿಂದ ನೆರವಾಗುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ನಿಗದಿಪಡಿಸಿದ್ದ ಆರೋಗ್ಯ ಸಹಾಯ ನಿಧಿಯ ಮೊತ್ತವನ್ನು ಪ್ರಸಕ್ತ ವರ್ಷದಿಂದ 50 ಲಕ್ಷಕ್ಕೆ ಹೆಚ್ಚಳ ಮಾಡಿ ನಗರಪಾಲಿಕೆ ಆಡಳಿತ ಬಜೆಟ್ ನಲ್ಲಿ ಅನುಮೋದಿಸಿದೆ.
ಸಂಘದ ಕೋರಿಕೆ ಮೇರೆಗೆ 2021-22ನೇ ಸಾಲಿನಲ್ಲಿ ನಗರ ಪಾಲಿಕೆ 25 ಲಕ್ಷ ರೂ. ಮೊತ್ತವನ್ನು ಆರೋಗ್ಯ ನಿಧಿಗೆ ಮೀಸಲಾಗಿಟ್ಟಿತ್ತು. ಅಧ್ಯಕ್ಷರಾದ ಎಸ್.ಟಿ.ರವಿಕುಮಾರ್ ಅವರ ನೇತೃತ್ವದಲ್ಲಿ ಸತತವಾಗಿ ನಡೆಸಿದ ಪ್ರಯತ್ನದ ಫಲವಾಗಿ 2022-23ನೇ ಸಾಲಿಗೆ 50 ಲಕ್ಷ ರೂ. ಮೊತ್ತವನ್ನು ಮೀಸಲಿರಿಸಿ, ಪಾಲಿಕೆ ಆಡಳಿತ ಈ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿದೆ.
22 ಜನರಿಗೆ ಉಪಯೋಗ
2021-22ನೇ ಸಾಲಿನ ಆರೋಗ್ಯ ಸಹಾಯ ನಿಧಿಯಲ್ಲಿ ಸುಮಾರು 22 ಮಂದಿ ಪತ್ರಕರ್ತರು
4.84.977 ಲಕ್ಷ ರೂ.ಮೊತ್ತವನ್ನು ಆರೋಗ್ಯದ ವೆಚ್ಚಕ್ಕಾಗಿ ಬಳಸಿಕೊಂಡಿದ್ದರು.
ನೆರವಾದವರಿಗೆ ಅಭಿನಂದನೆ
ಮಹಾನಗರ ಪಾಲಿಕೆಯಲ್ಲಿ ನಿಗದಿಪಡಿಸಿರುವ ಆರೋಗ್ಯ ಸಹಾಯ ನಿಧಿಯ ಮೊತ್ತವನ್ನು 50 ಲಕ್ಷಕ್ಕೆ ಹೆಚ್ಚಳ ಮಾಡಲು ನೆರವಾಗಿ ವಿಶೇಷ ಕಾಳಜಿ ತೋರಿದ ಮೇಯರ್ ಶಿವಕುಮಾರ್, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಡಿ.ನಾಗರಾಜ್, ಆಯುಕ್ತರಾದ ಲಕ್ಷ್ಮಿಕಾಂತ ರೆಡ್ಡಿ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರು ಆರೋಗ್ಯ ಸಂಬಂಧ ಆಸ್ಪತ್ರೆಗೆ ವೆಚ್ಚ ಮಾಡಿದ ಸಂದರ್ಭ ಪಾಲಿಕೆಯ ಆರೋಗ್ಯ ನಿಧಿಯನ್ನು ಬಳಕೆ ಮಾಡಿಕೊಳ್ಳಬೇಕೆಂಬುದು ಸಂಘದ ಅಭಿಲಾಷೆಯಾಗಿದೆ.