KR ಆಸ್ಪತ್ರೆಯಲ್ಲಿ ಆಕ್ಸಿಜನ್ ಪೈಪ್ ಬ್ಲಾಕ್: ತಪ್ಪಿದ ಬಾರಿ ಅನಾಹುತ..!
1 min readಮೈಸೂರು: ಮೈಸೂರಿನ KR ಆಸ್ಪತ್ರೆಯ ಆಕ್ಸಿಜನ್ ಟ್ಯಾಂಕ್ ಫ್ರೀಜ್ ಆಗಿ ಆಕ್ಸಿಜನ್ ಸರಬರಾಜು ಯಂತ್ರದ ಪೈಪ್ ಬ್ಲಾಕ್ ಆಗಿತ್ತು. ಆದರೆ ಆಸ್ಪತ್ರೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.
ವಾತಾವರಣಕ್ಕೆ ಆಕ್ಸಿಜನ್ ಮಂಜುಗೆಡ್ಡೆಯಂತಾಗಿದ್ದು ಐಸ್ ನಿಂದ ಆಕ್ಸಿಜನ್ ಸರಬರಾಜು ಯಂತ್ರದ ಪೈಪ್ ಗಳು ಬ್ಲಾಕ್ ಆಗಿತ್ತು. ತಕ್ಷಣ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ತಂಡ ಮಂಜುಗಡ್ಡೆ ಕರಗಿಸುವಲ್ಲಿ ಯಶಸ್ವಿ ಆಯಿತು. ಘನೀಕರಿಸಿದ ಮಂಜುಗಡ್ಡೆಗೆ ನೀರು ಸಿಂಪಡಿಸುವ ಮೂಲಕ ಐಸ್ ತೆರವುಗೊಳಿಸಲಾಯಿತು.
ಈ ಬಳಿಕ ಕೋವಿಡ್ ರೋಗಿಗಳಿಗೆ ಸರಾಗವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮದಿಂದ ಬಾರಿ ಅನಾಹುತ ತಪ್ಪಿದೆ. ಸ್ವಲ್ಪ ಯಾಮಾರಿದ್ದರು ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಇನ್ನು 800 ಕೋವಿಡ್ ರೋಗಿಗಳಿಗೆ ಈ ಟ್ಯಾಂಕ್ ಆಕ್ಸಿಜನ್ ಪೂರೈಸುತ್ತಿತ್ತು.