ಮೈಸೂರು ನಗರ ತಾಲೂಕಿಗೆ ನೀಡಿದ್ದ ರಜೆಯಲ್ಲಿ ಮಾರ್ಪಾಡು!

1 min read

ಮೈಸೂರಿನಲ್ಲಿ ದಿನೆ ದಿನೆ ಕೋವಿಡ್ ಪ್ರಕರಣ ಹೆಚ್ಚಳವಾದ ಹಿನ್ನಲೆಯಲ್ಲಿ ಮೈಸೂರು ನಗರ ಹಾಗೂ ತಾಲ್ಲೂಕಿನಲ್ಲಿ ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಆದೇಶ ಹೊರಡಿಸಿದ್ದರು. ಆದರೆ ಈಗ, ರಜೆಯ ಆದೇಶದಲ್ಲಿ ಮಾರ್ಪಾಡು ಮಾಡಿದ್ದು, 10ನೇ ತರಗತಿಗಳನ್ನು ನಡೆಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.

ಹೌದು, ಅದರಂತೆ ಕೇವಲ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ರಜೆ ನೀಡಿ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಮಾಡಿದ್ದಾರೆ. ಇನ್ನು ನಿನ್ನೆಯ ಆದೇಶದಲ್ಲಿ 1 ರಿಂದ 10ನೇ ತರಗತಿವರೆಗೂ ರಜೆ ಘೋಷಣೆ ಮಾಡಲಾಗಿತ್ತು.

ಆದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ಘೋಷಣೆಯಾಗಿರುವ ಕಾರಣದಿಂದಾಗಿ ಈ ಆದೇಶದಲ್ಲಿ ಜಿಲ್ಲಾಧಿಕಾರಿಗಳು ಮಾರ್ಪಾಡು ಮಾಡಿದ್ದು ಮೈಸೂರು ನಗರ ಮತ್ತು ಮೈಸೂರು ತಾಲ್ಲೂಕಿಗೆ ಮಾತ್ರ ಇದನ್ನ ಅನ್ವಯ ಮಾಡಲಾಗಿದೆ. ಅಲ್ಲದೆ ಈ ಆದೇಶವನ್ನ ಮುಂದಿನ ಆದೇಶದವರೆಗೂ 1 ರಿಂದ 9 ತರಗತಿಗಳಿಗೆ ರಜೆ ನೀಡಲಾಗಿದೆ.

About Author

Leave a Reply

Your email address will not be published. Required fields are marked *