ಮೈಸೂರಿನ ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
1 min readಮೈಸೂರು: ಮೈಸೂರಿನ ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೀಡಿ ಹಚ್ಚಿಕೊಂಡು ಬೆಂಕಿ ಕಡ್ಡಿಯನ್ನು ಸೋಫ ಅಂಗಡಿ ಬಿಸಾಡಿದ ವ್ಯಕ್ತಿ. ಸೋಫ ಅಂಗಡಿಯಿಂದ ಗ್ರಂಥಾಲಯಕ್ಕೆ ಬೆಂಕಿ ಹರಡಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನಿಡಿದ ಅವರು ವ್ಯಕ್ತಿಯೊಬ್ಬರು ಬೀಡಿ ಹಚ್ಚಿಕೊಂಡು ಬೆಂಕಿ ಕಡ್ಡಿಯನ್ನು ಸೋಫ ಅಂಗಡಿ ಬಿಸಾಡಿದ್ದಾರೆ. ರಾತ್ರಿ10 ಗಂಟೆಗೆ ಸಣ್ಣದಾಗಿ ಬೆಂಕಿ ಹೊತ್ತಿಕೊಂಡಿತ್ತು. ಆ ಸಮಯದಲ್ಲಿ ಸ್ಥಳಿಯರು ಬೆಂಕಿ ನಂದಿಸಿದ್ದರು. ಮತ್ತೆ ಅದೇ ಸ್ಥಳದಲ್ಲಿ ರಾತ್ರಿ 2 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸೋಫ ಅಂಗಡಿಯಿಂದ ಗ್ರಂಥಾಲಯಕ್ಕೆ ಬೆಂಕಿ ಹರಡಿದೆ. ಬೆಂಕಿ ಬಿದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೈಯದ್ ನಾಸೀರ್ ಎಂಬ ವ್ಯಕ್ತಿಯಿಂದ ಕೃತ್ಯ ನಡೆದಿದ್ದು, ಉದ್ದೇಶದಿಂದಲೆ ಬೆಂಕಿ ಹಾಕಿದ್ದಾನಾ..? ಇಲ್ಲ ಅಕಸ್ಮಿಕವಾಗಿ ಬೆಂಕಿ ಕಿಡಿ ಎಸೆದಿದ್ದಾನ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಂಪೂರ್ಣ ತನಿಖೆ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದರು.