ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಲ್.ನಾಗೇಂದ್ರ
1 min read
ಮೈಸೂರು,ಸೆ.18- ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ.23 ರ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಕೊಳಚೆ ನಿವಾಸಿಗಳ ಕ್ಷೇಮಾಭ್ಯುದಯ ಸಂಘದ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಲ್. ನಾಗೇಂದ್ರ ಚಾಲನೆ ನೀಡಿದರು.
ಇಂದು ನಗರದ ಕೆ.ಅರ್.ಎಸ್. ರಸ್ತೆ ಎಲ್.ಐ.ಸಿ ಕಚೇರಿಯ ಎದುರುಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಮಹಾನಗರಪಾಲಿಕೆಯ 24.1 ಹಾಗೂ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದ ಒಟ್ಟು19.00 ಲಕ್ಷ ರೂ. ದಲ್ಲಿ ವೆಚ್ಚದ ಕಾಮಗಾರಿ ಇದಾಗಿದೆ.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಮುಖಂಡರಾದ ದತ್ತಾತ್ರೇಯ ಶಿಂಧೆ, ಚಾಮರಾಜ ಕ್ಷೇತ್ರದ ಭಾಜಪ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಭದ್ರಿನಾಥ ಬಿ.ಎಲ್. ಎ-1 ದಿನೇಶ್ ಗೌಡ, ಮುಖಂಡರುಗಳಾದ ಶ್ರೀನಿವಾಸ್, ಸುದರ್ಶನ್, ಚರಣ್, ಲಕ್ಷ್ಮಿ, ಗೋಪಾಲಕೃಷ್ಣ ಪಾಪಣ್ಣ, ಗಣೇಶ್ ಮುಂತಾದವರು ಹಾಜರಿದ್ದರು.