ಇಂದು ನಾಡಹಬ್ಬ ದಸರೆಯ ಮೊದಲ ಪೂರ್ವಭಾವಿ ಸಭೆ!
1 min readಬೆಂಗಳೂರು – ಮೈಸೂರು : ನಾಡಹಬ್ಬ ದಸರೆಯ ಮೊದಲ ಪೂರ್ವಭಾವಿ ಸಭೆ ಇಂದು ಮಧ್ಯಾಹ್ನ 4 ಗಂಟೆಗೆ ನಡೆಯಲಿದ್ದು, ವಿಧಾನಸೌಧದಲ್ಲಿ ಈ ಕುರಿತು ಸಿಎಂ ನೇತೃತ್ವದಲ್ಲಿ ಚರ್ಚೆ ನಡೆಯಲಿದೆ. ಕಳೆದ ಬಾರಿ ಕೊರೋನಾ ಹಿನ್ನಲೆಯಲ್ಲಿ ಸರಳ ಮತ್ತು ಸಾಂಪ್ರಾದಾಯಿಕ ದಸರಾ ಆಚರಣೆ ಆಗಿತ್ತು. ಈ ಬಾರಿ ಕೋವಿಡ್ ಮೂರನೇ ಅಲೆಯ ಭೀತಿ ಇರುವ ಕಾರಣ ಈ ಬಾರಿಯು ಸರಳವಾಗಿ ದಸರಾ ಆಚರಿಸಲು ಸಿದ್ದತೆ ನಡೆಯುತ್ತಿದೆ. ಇನ್ನು ಇಂದು ಸಂಜೆ 4ಕ್ಕೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚರ್ಚಾ ಸಭೆ ಇದ್ದು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಆನಂದ್ ಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿರುತ್ತಾರೆ.