ಮೈಸೂರಿನಲ್ಲಿ ದರೋಡೆ, ಶೂಟ್ಔಟ್ ಪ್ರಕರಣ: ಗುಂಡು ಹಾರಿಸಿದ್ದ ಸಿಸಿಟಿವಿ ದೃಶ್ಯಾವಳಿ ಲಭ್ಯ
1 min readಮೈಸೂರು: ಮೈಸೂರಿನಲ್ಲಿ ದರೋಡೆ ಹಾಗೂ ಶೂಟ್ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಗುಂಡು ಹಾರಿಸಿದ್ದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ.
ಆಗಸ್ಟ್ 23 ರಂದು ಸಂಜೆ 5.10ರಲ್ಲಿ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಶೂಟ್ ಔಟ್ ಪ್ರಕರಣ ನಡೆದಿತ್ತು. ಚಿನ್ನದ ಓಲೆ ಖರೀದಿ ಮಾಡಲು ಬಂದಿದ್ದ ಯುವಕ ಸ್ಥಳದಲ್ಲೇ ಸಾವನಪ್ಪಿದ್ದ. ಅಮೃತ್ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿಗೆ ನುಗ್ಗಿದ್ದ ನಾಲ್ವರು ದರೋಡೆಕೊರರು. ಅಂಗಡಿಯಿಂದ ಎಸ್ಕೇಪ್ ಆಗೋ ವೇಳೆ ಈ ಡಕಾಯಿತರು ಗುಂಡು ಹಾರಿಸಿದ್ದರು. ಬೈಕ್ ನಿಲ್ಲಿಸಿ ಅಂಗಡಿ ಬಳಿಗೆ ಬರುತ್ತಿದ್ದ ಚಂದ್ರುಗೆ ಗುಂಡು ತಾಗಿತ್ತು. ಕ್ಷಣ ಮಾತ್ರದಲ್ಲಿ ಮೈಸೂರು ತಾಲೂಕಿನ ದಡದಹಳ್ಳಿ ನಿವಾಸಿ ಚಂದ್ರು ಕುಸಿದು ಬಿದ್ದಿದ್ದ.