ಮೈಸೂರು : ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಬಾಲಕ ಸಾವು ಸಹೋದರನಿಗೆ ಗಂಭೀರ ಗಾಯ!
1 min readಮೈಸೂರು ಗ್ರಾಮಾಂತರ : ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಬಾಲಕನೊರ್ವ ಮೃತಪಟ್ಟು, ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮನುಗನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಕಾವೇರಿ ಗಾರ್ಡನ್ ಸಿಟಿ ಲೇಔಟ್ ನಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗ್ತಿತ್ತು.
ಆದರೆ ಟ್ಯಾಂಕ್ನ ಸಮೀಪವೇ ಆಟವಾಡುತ್ತಿದ್ದ ಸುದೀಪ್, ಪ್ರದೀಪ್ ಸಹೋದರರ ಮೇಲೆ ಏಕಾಏಕಿ ನಿರ್ಮಾಣಹಂತದ ನೀರಿನ ಟ್ಯಾಂಕ್ ಕುಸಿದು ಬಿದ್ದಿದೆ. ಈ ವೇಳೆ ಹುಲ್ಲೇನಹಳ್ಳಿ ಗ್ರಾಮದ ಮಂಜುನಾಯಕ ಪುತ್ರ ಸುದೀಪ್ (14) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಸಹೋದರ ಪ್ರದೀಪ್ ಗೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.