ಸಿಎಂ ಬಿಎಸ್ವೈಗೆ ಮಠಾಧೀಶರ ಬೆಂಬಲ: ಮಠಾಧೀಶರ ವಿರುದ್ಧ ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಕಿಡಿ
1 min readಬೆಂಗಳೂರು: ಸಿಎಂ ಬಿಎಸ್ವೈ ಗೆ ಮಠಾಧೀಶರ ಬೆಂಬಲ ವಿಚಾರ ಮಠಾಧೀಶರ ವಿರುದ್ಧ ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಕಿಡಿ ಕಾರಿದ್ದಾರೆ.
ಟ್ವೀಟ್ಟರ್ ನಲ್ಲಿ ಬಿಎಸ್ವೈ ಪರ ನಿಂತ ಮಠಾಧೀಶರಿಗೆ ಟಾಂಗ್ ನೀಡಿದ್ದಾರೆ. ಮಠಾಧೀಶರು ಮಾರ್ಗದರ್ಶನದ ಕರ್ತವ್ಯವನ್ನು ಮರೆತಿದ್ದಾರೆ. ಜನವಿರೋಧಿ ಸರ್ಕಾರವೊಂದನ್ನು ರಕ್ಷಿಸಲು ಮುಂದಾಗ್ತಿದ್ದಾರೆ. ಜಾತಿ ರಾಜಕಾರಣದೊಳಗೆ ಧುಮುಕಿರುವುದು ಜಾತಿವಾದಿ ಸಮಾಜವನ್ನು ಮುಂದುವರೆಸುವ ಅಪಾಯವನ್ನು ಸೂಚಿಸುತ್ತಿದೆ. ಅಷ್ಟಕ್ಕೂ ಬೆಲೆ ಏರಿಕೆ ಮತ್ತು ಕಳಪೆ ಆಡಳಿತದಿಂದಾಗಿ ಜನ ಸಾಮಾನ್ಯರ ಬದುಕು ದುಸ್ಥಿತಿಗೆ ಬಂದಿದೆ.
ಈ ಬಗ್ಗೆ ಸರ್ಕಾರವೊಂದಕ್ಕೆ ಚಾಟಿ ಬೀಸಬೇಕಾದ ಜವಾಬ್ದಾರಿಯನ್ನ ಮರೆತಿದ್ದಾರೆ. ಜಾತಿಯ ಕಾರಣಕ್ಕೆ ಜನ ವಿರೋಧಿ ಸರ್ಕಾರದ ಪರ ನಿಲ್ಲುವುದು ನಿಜಕ್ಕೂ ತಲೆ ತಗ್ಗಿಸುವಂತಹ ಸಂಗತಿ ಎಂದಿದ್ದಾರೆ.