ಚಾಮುಂಡಿ ದರ್ಶನಕ್ಕೆ ಪ್ರವೇಶ ನಿರ್ಬಂಧ ಹಿನ್ನಲೆ – ಬೆಟ್ಟಕ್ಕೆ ತೆರಳುವ ಮೆಟ್ಟಿಲು ಮಾರ್ಗ ಬಂದ್
1 min readಮೈಸೂರು: ಚಾಮುಂಡೇಶ್ವರಿ ದರ್ಶನಕ್ಕೆ ಪ್ರವೇಶ ನಿರ್ಬಂಧ ಹಿನ್ನಲೆ ಚಾಮುಂಡಿ ಬೆಟ್ಟಕ್ಕೆ ತೆರಳುವ ಮೆಟ್ಟಿಲು ಮಾರ್ಗ ಬಂದ್ ಮಾಡಲಾಗಿದೆ.
ಬ್ಯಾರಿಕೇಡ್ ಅಳವಡಿಸಿ, ಪೊಲೀಸರ ನಿಯೋಜನೆ ಮಾಡಲಾಗಿದೆ. ಕೊರೊನಾ ಹರಡುವಿಕೆ ತಡೆಗಟ್ಟಲು ಭಕ್ತಾದಿಗಳು ಬಾರದಂತೆ ತಡೆಯಲಾಗುತ್ತಿದೆ. ಆಷಾಡ ಮಾಸದಲ್ಲಿ ಚಾಮುಂಡಿ ದೇವಿಗೆ ವಿಶೇಷ ಪೂಜೆ ಪುರಸ್ಕಾರ ನಡೆಯುತ್ತದೆ. ಆಷಾಡ ಮಾಸದಲ್ಲಿ ಚಾಮುಂಡೇಶ್ವರಿ ದರ್ಶನಕ್ಕಾಗಿ ಸಹಸ್ರಾರು ಭಕ್ತರು ಆಗಮಿಸುತ್ತಿದ್ದರು.
ಕೊರೊನಾ ಹಿನ್ನಲೆ ಮೊದಲ ಅಲೆ, ಎರಡನೇ ಅಲೆಯಿಂದ ಚಾಮುಂಡಿ ದರ್ಶನ ಬಂದ್ ಆಗಿದೆ. ಕೊರೊನಾ ಮಾರ್ಗಸೂಚಿ ಇರುವುದರಿಂದ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧ ಏರಲಾಗಿದೆ.