ಮೈಸೂರಿಗಿಲ್ಲ ಅನ್‌ಲಾಕ್ ಭಾಗ್ಯ! 13 ಜಿಲ್ಲೆಗೆ ಮೊದಲ ಹಂತದ ಅನ್‌ಲಾಕ್! ಕಂಪ್ಲೀಟ್ ಲಾಕ್‌ಡೌನ್ ಸಡಿಲಿಕೆಯ ಮಾಹಿತಿ ಇಲ್ಲಿದೆ!
1 min readಮತ್ತೇ ಮೈಸೂರಲ್ಲಿ ಮುಂದಿನ ಆದೇಶದವರೆಗು ಲಾಕ್‌ಡೌನ್ ಮುಂದುವರೆಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಪಾಸಿಟಿವಿಟಿ ರೇಟ್ ಶೇ.5 ಕ್ಕಿಂತ ಹೆಚ್ಚಿರುವ ಜಿಲ್ಲೆಗಳಿಗೆ ಜೂ.11ರ ಆದೇಶದ ಅನ್ವಯ ಲಾಕ್‌ಡೌನ್ ಸಡಿಲಿಕೆ ಮಾಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. 13 ಜಿಲ್ಲೆಗಳಿಗೆ ಕೆಲವೊಂದು ನಿಬಂಧನೆ ಸಡಿಲಗೊಳಿಸಿ ಅನ್‌ಲಾಕ್ ಮಾಡಲಾಗಿದೆ.
ಮುಂದಿನ ಆದೇಶದ ವರೆಗು ಈ ಅನ್‌ಲಾಕ್ ಮಾಡಲಾಗಿದ್ದು ವೀಕೆಂಡ್ ಕರ್ಫ್ಯೂ ಇಡೀ ರಾಜ್ಯಕ್ಕೆ ಎಂದಿನಂತೆ ಮುಂದುವರೆಯಲಿದೆ ಎಂದು ಬೆಂಗಳೂರಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಶೇ.10ಕ್ಕು ಹೆಚ್ಚು ಪಾಸಿಟಿವಿಟಿ ರೇಟ್ ಹೆಚ್ಚಿರುವ ಕಾರಣ ಮೈಸೂರು ಜಿಲ್ಲೆಯಲ್ಲಿ ಈಗಿರುವಂತೆ ಲಾಕ್‌ಡೌನ್ ಮುಂದುವರೆಯಲಿದೆ. ಇದರ ನಡುವೆ ಶೇ. 50ರಷ್ಟು ಹೋಟೆಲ್‌ನಲ್ಲಿ ಕುಳಿತು ತಿನ್ನಲು ಅವಕಾಶ ನೀಡಲಾಗಿದ್ದು ಎಸಿ ಹಾಕದಂತೆ ಸೂಚಿಸಲಾಗಿದೆ.
ಚಪ್ಪಲಿ ಅಂಗಡಿ, ಎಲೆಕ್ಟ್ರಿಕ್ ಅಂಗಡಿ, ಬಟ್ಟೆ ಅಂಗಡಿ ತೆರೆಯಲು ಅನುವು ಮಾಡಿಕೊಡಲಾಗಿದೆ. ಇದರ ಬೆನ್ನಲ್ಲೇ ಬೈಕ್, ಕಾರ್ ಶೋರೂಂ, ಗ್ಯಾರೆಜ್ ಸರ್ವೀಸ್‌ಗು ಅವಕಾಶ ಕಲ್ಪಿಸಲಾಗಿದೆ. ಇದೆಲ್ಲವು ಅನ್‌ಲಾಕ್ ಆದ ಜಿಲ್ಲೆಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಆದರೆ ಮೈಸೂರಲ್ಲಿ ಮಾತ್ರ ಲಾಕ್‌ಡೌನ್ ಈಗಿರುವಂತೆಯೇ ಮುಂದುವರೆಯಲಿದೆ.
ಕೊರೊನಾ ರಾಜ್ಯ ಲಾಕ್‌ಡೌನ್ ಮಹತ್ವದ ಮಾಹಿತಿ–
ಕಳೆದ ಒಂದು ವಾರದಲ್ಲಿ 16 ಜಿಲ್ಲೆಗಳಲ್ಲಿ 5% ಗಿಂತ ಕಡಿಮೆ ಪಾಸಿಟಿವಿಟಿ ದರ ಆಗಿದೆ.
13 ಜಿಲ್ಲೆಗಳಲ್ಲಿ ಶೇ.5-10 % ಪಾಸಿಟಿವ್ ಇದೆ
ಮೈಸೂರಿನಲ್ಲಿ ಶೇ 10 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇದೆ.
• ಈ ಪಾಸಿಟಿವಿಟಿ ಆಧಾರದ ಮೇಲೆ ನಿರ್ಬಂಧಗಳ ಸಡಿಲಿಕೆಗಳನ್ನು ತೀರ್ಮಾನಿಸಲಾಗಿದೆ.
– ಶೇ 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳು.
ಉತ್ತರ ಕನ್ನಡ
ಬೆಳಗಾವಿ
ಮಂಡ್ಯ
ಕೊಪ್ಪಳ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಂಗಳೂರು ನಗರ (ಬಿ.ಬಿ.ಎಂ.ಪಿ ಸೇರಿದಂತೆ)
ಗದಗ
ರಾಯಚೂರು
ಬಾಗಲಕೋಟೆ
ಕಲಬುರಗಿ
ಹಾವೇರಿ
ರಾಮನಗರ
ಯಾದಗಿರಿ
ಬೀದರ್
ಈ ಕೆಳಕಂಡ ಸಡಿಲಿಕೆ.
- ಎಲ್ಲಾ ಅಂಗಡಿಗಳನ್ನು ಸಂಜೆ 5 ಗಂಟೆವರೆಗೆ ತೆರೆಯಲು ಅನುವು.
- ಎಸಿ. ಚಾಲನೆಗೊಳಿಸದೇ ಹೋಟೆಲ್, ಕ್ಲಬ್ಸ್, ರೆಸ್ಟೋರೆಂಟ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಂಜೆ 5.00 ಗಂಟೆವರೆಗೆ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ
- ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ.
- ಬಸ್ ಮತ್ತು ಮೆಟ್ರೋ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆಗೆ ಅವಕಾಶ.
- ಹೊರಾಂಗಣ ಕ್ರೀಡೆಗಳಿಗೆ, ವೀಕ್ಷಕರಿಲ್ಲದೇ ಅನುಮತಿ.
- ಸರ್ಕಾರಿ/ಖಾಸಗಿ ಕಛೇರಿಗಳಿಗೆ ಶೇ 50 ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ.
- ಲಾಡ್ಜ್ ಗಳಲ್ಲಿ ಮತ್ತು ರೆಸಾರ್ಟ್ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ.
- ಜಿಮ್ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ (ಹವಾ ನಿಯಂತ್ರಣ ಇಲ್ಲದೇ) ಅವಕಾಶ.
ಶೇ 5 ಕ್ಕಿಂತ ಹೆಚ್ಚಿನ ಪಾಜಿಟಿವಿಟಿ ದರ ಇರುವ 13 ಜಿಲ್ಲೆಗಳು
ಹಾಸನ
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ಚಾಮರಾಜನಗರ
ಚಿಕ್ಕಮಗಳೂರು
ಬೆಂಗಳೂರು ಗ್ರಾಮಾಂತರ
ದಾವಣಗೆರೆ
ಕೊಡಗು
ಧಾರವಾಡ
ಬಳ್ಳಾರಿ
ಚಿತ್ರದುರ್ಗ
ವಿಜಯಪುರ
11-06-2021 ಆದೇಶದಲ್ಲಿ ನೀಡಿರುವ ಸಡಿಲಿಕೆಗಳು ಅನ್ವಯ.
– ಶೇ. 10 ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ಇರುವ ಮೈಸೂರು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧಗಳು ಮುಂದುವರೆಯುವುದು.
ರಾಜ್ಯವ್ಯಾಪಿ ಅನ್ವಯವಾಗುವಂತೆ
- ಪ್ರತಿ ದಿನ ನೈಟ್ ಕರ್ಫ್ಯೂ ರಾತ್ರಿ 07.00 ಗಂಟೆಯಿಂದ ಬೆಳಗ್ಗೆ 05 ಗಂಟೆವರೆಗೆ.
- ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 07.00 ಗಂಟೆಯಿಂದ ಸೋಮವಾರ ಬೆಳಿಗ್ಗ 05.00 ಗಂಟೆಯವರೆಗೆ ಜಾರಿ.
- ಬಸ್ ಸಂಚಾರವು ಶೇ. 50 ಪ್ರಯಾಣಿಕರಿಗೆ ಮಿತಿಗೊಳಿಸಿ ಅನುಮತಿ.