ಕೋವಿಡ್ ಕೇಂದ್ರದಲ್ಲಿ ಸೋಂಕಿತರಿಗೆ ಆನ್ಲೈನ್ ಮೂಲಕ ಯೋಗಾಭ್ಯಾಸ ತರಬೇತಿ
1 min readಮೈಸೂರು: ಮೈಸೂರಿನ ಮಂಡಕಳ್ಳಿ ಕೋವಿಡ್ ಕೇಂದ್ರದಲ್ಲಿ ಸೋಂಕಿತರಿಗೆ ಆನ್ಲೈನ್ ಮೂಲಕ ಯೋಗಾಭ್ಯಾಸ ತರಬೇತಿ ನೀಡಲಾಗುತ್ತಿದೆ.
ಮೈಸೂರಿನ ವ್ಯಕ್ತಿ ವಿಕಸನ ಕೇಂದ್ರದ ಯೋಗಪಟುಗಳಿಂದ ತರಬೇತಿ ಆಯೋಜನೆ ಮಾಡಲಾಗಿದ್ದು, ಕೋವಿಡ್ ಕೇಂದ್ರದ ಸುಮಾರು 200 ಕ್ಕೂ ಹೆಚ್ಚು ಸೋಂಕಿತರಿಗೆ ಯೋಗ, ಪ್ರಾಣಾಯಾಮ ಅಭ್ಯಾಸ ಹೇಳಿಕೊಡಲಾಗುತ್ತಿದೆ.
ಕೋವಿಡ್ ಕೇಂದ್ರದ ಹೊರ ಆವರಣದಲ್ಲಿ ಪ್ರತಿದಿನ ಸಂಜೆ 6.30 ರಿಂದ 7.30 ರವರೆಗೆ ಯೋಗ, ಪ್ರಾಣಾಯಾಮ, ಧ್ಯಾನ ಹೇಳಿಕೊಡುತ್ತಿದೆ ಈ ತಂಡ. ಮಾನಸಿಕ ಹಾಗೂ ದೈಹಿಕವಾಗಿ ಸದೃಢರನ್ನಾಗಿಸುವ ಗುರಿ ಇಟ್ಟುಕೊಂಡು ವ್ಯಕ್ತಿ ವಿಕಸನ ಕೇಂದ್ರದ ಹಿರಿಯ ಯೋಗ ಶಿಕ್ಷಕಿ ನಾಗನಂದಿನಿ, ಆನಂದ್, ರವಿಕುಮಾರ್, ಸುಭಾಷ್ ಭಾರದ್ವಾಜ್ ರಿಂದ ಸೋಂಕಿತರಿಗೆ ಯೋಗಾಭ್ಯಾಸ ಹೇಳಿಕೊಡುತ್ತಿದ್ದಾರೆ. ಈ ಮೂಲಕ ದಿನದ 24 ಗಂಟೆಯಲ್ಲೂ ಸೋಂಕಿನ ಅರಿವು ಮರೆತು ಸೋಂಕಿತರು ಲವಲವಿಕೆಯಿಂದಿದ್ದಾರೆ.